ನಾಲತವಾಡ ಪಟ್ಟಣದ ಬಜಾರದಲ್ಲಿ ಗಾಳಿಗೆ ಹಾರಿ ಬಂದ ನತ್ಯಾಜ್ಯ, ಪ್ಲಾಸ್ಟಿಕ್​, ಹಾಳೆಗಳು.  
ಜಿಲ್ಲೆ

ನಾಲತವಾಡದಲ್ಲಿ ಗಾಳಿಗೆ ಹಾರಿಹೋದ ತಗಡು

Vijayapura - Desk - Shamarao Kulkarni

ನಾಲತವಾಡ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ರಭಸಕ್ಕೆ ಪಟ್ಟಣದ ಕೆಲ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿ ತಗಡುಗಳು ಹಾರಿಹೋಗಿವೆ.

ಪಟ್ಟಣವೆಲ್ಲ ಬಹುತೇಕ ಧೂಳುಮಯವಾಗಿತ್ತು. ಅಂಗಡಿಗಳ ಒಳಹೊಕ್ಕ ಧೂಳು ಮಿಶ್ರಿತ ಗಾಳಿಯೊಂದಿಗೆ ನ ತ್ಯಾಜ್ಯ, ಪ್ಲಾಸ್ಟಿಕ್​ ಹಾಳೆಗಳು ಗಾಳಿಪಟದಂತೆ ಹಾರಾಡುವ ದೃಶ್ಯ ಎಲ್ಲೆಡೆ ಕಂಡುಬಂದಿತು.

ಹೊಲಗಳಲ್ಲಿ ಸಂಗ್ರಹಿಸಿದ್ದ ಒಣ ಮೆಣಸಿನ ಕಾಯಿ ಚೆಲ್ಲಾಪಿಲ್ಲಿಯಾಗಿದೆ. ಮಳೆ ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.