ಜಿಲ್ಲೆ

ಮಹಡಿ ಮೇಲಿಂದ ಬಿದ್ದು ಮರದ ವ್ಯಾಪಾರಿ ಮೃತ

ಸಿದ್ದಾಪುರ : ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ಮಹಡಿ ಮೇಲಿಂದ ಬಿದ್ದು ವ್ಯಕ್ತಿಯೊಬ್ಬರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮರದ ವ್ಯಾಪಾರಿ ಪುಳಿಶೇರಿ ಹಂಸ (63) ಮೃತ.

ಮನೆಯ ಮಹಡಿಯ ಮೇಲೆ ವಾಯು ವಿಹಾರ ನಡೆಸುತ್ತಿದ್ದ ಸಂದರ್ಭ ಏಕಾಏಕಿ ರಕ್ತದ ಒತ್ತಡ ಕಡಿಮೆಯಾದ ಪರಿಣಾಮ ಪುಳಿಶೇರಿ ಹಂಸ ಕೆಳಗೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.