ಗುಂಡ್ಲುಪೇಟೆ ತಾಲೂಕಿನ ಮದ್ದೂರು ವಲಯದ ಕಾಡಂಚಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆ ನೆರವಿನಿಂದ ಕೂಂಬಿಂಗ್ ನಡೆಸುತ್ತಿದೆ.  
ಜಿಲ್ಲೆ

ಮೂರನೇ ದಿನವೂ ಕಣ್ಣಿಗೆ ಬೀಳದ ಹುಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಅರಣ್ಯದ ಕಾಡಂಚಿನ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೂರನೇ ದಿನವೂ ಸಾಕಾನೆ ನೆರವಿನಿಂದ ಕೂಂಬಿಂಗ್ ನಡೆಸಿದೆ.

ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಕಾಡಂಚಿನ ಚೆನ್ನಮಲ್ಲಿಪುರ ಮದ್ದಯ್ಯನಹುಂಡಿ, ಬೇರಂಬಾಡಿ ಗ್ರಾಮಗಳ ಜಮೀನುಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಶುಕ್ರವಾರದಿಂದಲೂ ಸಾಕಾನೆ ರೋಹಿತ್ ಎಸ್‌ಟಿಪಿಎಫ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ನೆರವಿನಿಂದ ಕೂಂಬಿಂಗ್ ನಡೆಸುತ್ತಿದೆ. ಸಾಕಾನೆ ಜತೆಗೆ ಜತೆಗೆ ಡ್ರೋನ್ ಕೂಡ ಬಳಕೆ ಮಾಡಲಾಗಿದೆ. ಅಲ್ಲದೆ ಹುಲಿ ಕಣ್ಣಿಗೆ ಬಿದ್ದಿದ್ದು ಅದರ ಆರೋಗ್ಯದ ಸ್ಥಿತಿಗತಿ ಪತ್ತೆಗೆ ಕ್ಯಾಮರಾಗಳನ್ನು ಅಳವಡಿಸಲಾಗಿದ್ದರೂ ಹುಲಿ ಪತ್ತೆಯಾಗಿಲ್ಲ. ಆದರೆ ಹುಲಿ ಅಲ್ಲಲ್ಲಿ ಜಮೀನುಗಳಲ್ಲಿರುವ ರೈತರ ಕಣ್ಣಿಗೆ ಬೀಳುತ್ತಿದ್ದು ಅವರು ಕರೆ ಮಾಡಿ ತಿಳಿಸಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುತ್ತಿದೆ. ಆದರೆ ಎಲ್ಲಿಯೂ ಪತ್ತೆಯಾಗಿಲ್ಲ. ಆದರೂ ಕೂಂಬಿಂಗ್ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

--------

ಫೋಟೋ: 07-ಸೆ-ಜಿಪಿಟಿ-2

ಗುಂಡ್ಲುಪೇಟೆ ತಾಲೂಕಿನ ಮದ್ದೂರು ವಲಯದ ಕಾಡಂಚಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆ ನೆರವಿನಿಂದ ಕೂಂಬಿಂಗ್ ನಡೆಸುತ್ತಿದೆ.