ಶಿಗ್ಗಾಂವಿ: ಪಕ್ಷದ ಹಿತದೃಷ್ಟಿ, ಕಾರ್ಯಕರ್ತರ ಒತ್ತಾಯ ಹಾಗೂ ೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ವರಿಷ್ಠರು ಭರತ್ಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ವರಿಷ್ಠರ, ನನ್ನ ಜನರ ನಿರ್ಧಾರಕ್ಕೆ ತಲೆ ಬಾಗಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ೇತ್ರದ ಕಾರ್ಯಕರ್ತರು, ಮತದಾರರಿಗೆ ತಲೆ ಬಾಗುತ್ತೆನೆ. ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಲಿಲ್ಲ, ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಸುಮಾರು 50 ಆಕಾಂಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರಬೇಕು ಎಂದು ಹೇಳಿದ್ದೆ ಎಂದರು.
ಪುತ್ರ ಭರತನನ್ನು ಹೆತ್ತ ತಂದೆ&ತಾಯಿ ನಾವಾಗಿರಬಹುದು. ೇತ್ರದ ಸಾರ್ವತ್ರಿಕ ಸೇವೆಯಲ್ಲಿ ನೀವೇ ಅವನಿಗೆ ತಂದೆ&ತಾಯಿಗಳು. ನೀವು ಕೈಯಿಂದ ತೊರಿಸಿದ ಕೆಲಸ ಆತ ತಲೆ ಮೇಲೆ ಹೊತ್ತು ನಿಮ್ಮ ಸೇವೆ ಮಾಡಲಿ. ನಿಮ್ಮ ಮಡಿಲಿಗೆ ಹಾಕಿದ್ದೇನೆ. ಹಾಲಲ್ಲಾದರೂ ಹಾಕಿ, ನೀರಲ್ಲಾದರೂ ಹಾಕಿ. ನೀವು ಬೆಳೆಸಿ ಜೋಪಾನ ಮಾಡುವುದು ನಿಮಗೆ ಬಿಟ್ಟಿದ್ದು ಎಂದು ಬೊಮ್ಮಾಯಿ ಹೇಳಿದರು.
ಭರತ್ ಬೊಮ್ಮಾಯಿ ಮಾತನಾಡಿ, ನಮ್ಮ ತಂದೆ ತಾಯಿಯ ಆಶೀರ್ವಾದದ ಫಲದಿಂದ ನನಗೆ ಈ ಅವಕಾಶ ಸಿಕ್ಕಿದೆ. ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಶಿಗ್ಗಾಂವಿ ಸವಣೂರಿನ ಜನತೆಯ ಕಷ್ಟ ಸುಖದಲ್ಲಿ ಸದಾಕಾಲ ಇರುತ್ತೇನೆ ಎಂದರು.
ಮಾಜಿ ಸಚಿವ ಸಿ.ಸಿ.ಪಟೀಲ ಮಾತನಾಡಿ, ೇತ್ರಕ್ಕೆ ಬೊಮ್ಮಾಯಿ ಅವರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ನವರು ಕೇಳುತ್ತಾರೆ. ಕಾಂಗ್ರೆಸ್ ಆಡಳಿತದಲ್ಲಿ ಈ ೇತ್ರ ಹೇಗಿತ್ತು, ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಹೇಗಿದೆ ಎಂಬುದನ್ನು ಕಾಂಗ್ರೆಸಿಗರು ಮೊದಲು ಅರಿಯಲಿ. ಆಗ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯ ಗುರುತಾಗುತ್ತದೆ ಎಂದರು.
ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಕಳಕಪ್ಪ ಬಂಡಿ, ಡಿಎಸ್ ಮಾಳಗಿ ಮಾತನಾಡಿದರು. ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಎಸ್.ವಿ. ಸಂಕಣ್ಣನವರ, ಅರುಣಕುಮಾರ ಪೂಜಾರ, ಡಿ.ಎಂ. ಪಾಟೀಲ, ಚಂದ್ರು ಲಮಾಣಿ, ಈರಣ್ಣ ನವಲಗುಂದ, ವಿಶ್ವನಾಥ ಹರವಿ, ಗಂಗಣ್ಣ ಸಾತಣ್ಣನವರ, ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ, ದೇವಣ್ಣ ಚಾಕಲಬ್ಬಿ, ಶಂಕರಗೌಡ ಪೊಲೀಸಗೌಡ್ರ, ಶೋಭಾ ನಿಸ್ಸಿಮಗೌಡ್ರ, ಮಲ್ಲೇಶಪ್ಪ ಹರಿಜನ, ಎಂ.ಎಸ್. ಹಳವಳ್ಳಿ, ಬಿ.ಟಿ. ಇನಾಮತಿ ಇತರರಿದ್ದರು.