ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ಬೀಸಿದ ಬಿರುಗಾಳಿಗೆ ಹಂಚಿನ ಮನೆ ಜಖಂಗೊಂಡಿರುವುದು. 
ಜಿಲ್ಲೆ

ಚಾಮನಹಳ್ಳಿಯಲ್ಲಿ ಬಿರುಗಾಳಿಗೆ ಮನೆ ಜಖಂ

ಮದ್ದೂರು: ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ಬೀಸಿದ ಬಿರುಗಾಳಿಗೆ ಹಂಚಿನ ಮನೆ ಜಖಂಗೊಂಡಿದೆ. ಗ್ರಾಮದ ನಾಗರಾಜಯ್ಯ ಅವರ ಮನೆ ಬಿರುಗಾಳಿಗೆ ಮನೆ ಜಖಂಗೊಂಡು, ಮನೆಯಲ್ಲಿದ್ದ ದವಸಧಾನ್ಯ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕೊಡಿಸುವಂತೆ ಮನೆಯ ಮಾಲೀಕ ನಾಗರಾಜಯ್ಯ ಮನವಿ ಮಾಡಿದ್ದಾರೆ.