ಜಿಲ್ಲೆ

ವಂಡರ್​ಲಾನಲ್ಲಿ ಶಿಕ್ಷಕರ ದಿನಾಚರಣೆ ವಿಶೇಷ: ಆಯ್ದ 150 ಶಾಲೆಗಳ 300 ಶಿಕ್ಷಕರಿಗೆ ಉಚಿತ ಪ್ರವೇಶ

ರಾಮನಗರ: ಬಿಡದಿ ಬಳಿ ಇರುವ ಭಾರತದ ಅತಿದೊಡ್ಡ ಅಮ್ಯೂಸ್​ಮೆಂಟ್​ ಪಾರ್ಕ್​ ವಂಡರ್​ಲಾ ಹಾಲಿಡೇಸ್​ ಸಂಸ್ಥೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳ 300 ಶಿಕ್ಷಕರಿಗೆ ಉಚಿತ ಪ್ರವೇಶ ನೀಡುತ್ತಿದೆ.

ಇದಷ್ಟೇ ಅಲ್ಲದೆ, ಆ.29ರಿಂದ ಸೆ.5ರ ಅವಧಿಯಲ್ಲಿ ವಂಡರ್​ಲಾ ಪಾರ್ಕ್​ಗೆ ಭೇಟಿ ನೀಡುವ ಎಲ್ಲ ಶಿಕ್ಷಕರಿಗೂ ಬುಕಿಂಗ್​ ಮೇಲೆ ಶೇ.20 ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ತೋರಿಸಬೇಕು. ವಿವರಗಳಿಗೆ www.wonderla.com ಭೇಟಿ ನೀಡಿ ಅಥವಾ 080- 37230333, 080 - 35073966 ಕರೆ ಮಾಡಬಹುದು.