ಬಂಗಾರದ ಸರವನ್ನು ಮಾಲಕಿ ರಾಜೇಶ್ವರಿ ಅವರಿಗೆ ಕೋಟೆ ಠಾಣೆ ಇನ್‌ಸ್ಪೆಕ್ಟರ್ ಗುರು ಬಸವರಾಜ್ ಹಸ್ತಾಂತರಿಸಿದರು. ಕುಮಾರ್ ಇದ್ದರು. 
ಜಿಲ್ಲೆ

ಬಂಗಾರದ ಸರ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಟೈಲರ್

ಶಿವಮೊಗ್ಗ: ಅಂಗಡಿ ಮುಂದೆ ಬಿದ್ದಿದ್ದ ಬಂಗಾರದ ಸರವನ್ನು ಪೊಲೀಸರ ಮೂಲಕ ಮಾಲೀಕರಿಗೆ ಒಪ್ಪಿಸಿ ಟೈಲರ್‌ವೊಬ್ಬರು ಪ್ರಾಮಾಣಿಕತೆ ಮರೆದಿದ್ದಾರೆ.

ಬಿ.ಎಚ್.ರಸ್ತೆಯ ಸಂಗಮ್ ಟೈಲರ್ ಮಾಲೀಕ ಕುಮಾರ್ ಸರವನ್ನು ಮಾಲೀಕರಿಗೆ ಹಸ್ತಾಂತರಿಸಿದರು. ಶನಿವಾರ ಸಂಜೆ ಬುದ್ದನಗರ ರಂಜಿತಾ ಮತ್ತು ಅವರ ತಾಯಿ ರಾಜೇಶ್ವರಿ ಅವರು ಬಿ.ಎಚ್.ರಸ್ತೆಯ ಸಂಗಮ್ ಟೈಲರ್ ಎದುರು ಬೈಕ್‌ನಲ್ಲಿ ಹೋಗುತ್ತಿದ್ದಾಗ 32 ಗ್ರಾಂನ ಬಂಗಾರದ ಸರ ಬಿದ್ದಿತ್ತು.
ಬಳಿಕ ಅದು ಕುಮಾರ್ ಅವರಿಗೆ ಸಿಕ್ಕಿತ್ತು. ಅದನ್ನು ಕುಮಾರ್ ಅವರು ಕೋಟೆ ಠಾಣೆ ಪೊಲೀಸರಿಗೆ ನೀಡಿದ್ದರು. ಕೋಟೆ ಠಾಣೆ ಇನ್‌ಸ್ಪೆಕ್ಟರ್ ಗುರು ಬಸವರಾಜ್ ಅವರ ಸಮ್ಮುಖದಲ್ಲಿ ಬಂಗಾರದ ಸರವನ್ನು ಮಾಲಕಿ ರಾಜೇಶ್ವರಿ ಅವರಿಗೆ ಹಸ್ತಾಂತರಿಸಲಾಯಿತು.