ಮುಳ್ಳೇರಿಯ: ಬೋವಿಕ್ಕಾನ ಬಳಿಯ ಪೊವ್ವಲ್ ಬೆಂಚ್ ಕೋರ್ಟ್ ಸಮೀಪದ ಪಿ.ಎ.ಜಾಫರ್ ಎಂಬುವವರ ಪತ್ನಿ ಅಲೀಮ ಯಾನೆ ಶೈಮ(35) ಆತ್ಮಹತ್ಯೆ ಮಾಡಿಕೊಂಡಿದ್ದು. ಇದಕ್ಕೂ ಮುನ್ನ ಅವರು ಬರೆದಿಟ್ಟ ಪತ್ರ ಪತ್ತೆಯಾಗಿದೆ.
ಅದರಲ್ಲಿ ಬೆಚ್ಚಿ ಬೀಳಿಸುವ ಕೆಲವು ಮಾಹಿತಿಗಳಿವೆಯೆನ್ನಲಾಗಿದೆ. ತನಿಖೆಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಪತ್ರದಲ್ಲಿರುವ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಮಂಗಳವಾರ ರಾತ್ರಿ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಶೈಮ ಅವರ ಮೃತದೇಹ ಪತ್ತೆಯಾಗಿತ್ತು. ಪತಿಯ ಕಿರುಕುಳ ಸಹಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ಶೈಮ ಸುಳ್ಯ ಜಯನಗರ ನಿವಾಸಿ.