ಗೋಣಿಕೊಪ್ಪಲು: ಒಕ್ಕಲಿಗರ ಯುವ ವೇದಿಕೆ ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ಸಮಿತಿ ವತಿಯಿಂದ ಶುಕ್ರವಾರದಿಂದ 3 ದಿನಗಳ ಕಾಲ ಹಾತೂರು ಶಾಲಾ ಮೈದಾನದಲ್ಲಿ ಜರುಗಿದ ಒಕ್ಕಲಿಗರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮ್ಮಿಲನವು ಯಶಸ್ವಿಯಾಗಿ ನೆರವೇರಿತು.
ಕ್ರಿಕೆಟ್, ಹಗ್ಗಜಗ್ಗಾಟ, ಶಾಟ್‌ಫುಟ್, ರಂಗೋಲಿ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಕಣ್ಣಂಗಾಲ ಹಾಗೂ ಕೋಟೆಕೊಪ್ಪ ತಂಡಗಳ ನಡುವೆ ನಡೆದ ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಣ್ಣಂಗಾಲ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಹಾತೂರು ತಂಡ ತೃತೀಯ, ಕೈಕೇರಿ ತಂಡ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಉತ್ತಮ ಬ್ಯಾಟ್ಸ್‌ಮನ್ ಆಗಿ ರವಿಕುಮಾರ್, ಮ್ಯಾನ್ ಆಫ್‌ದಿ ಸೀರಿಸ್ ಭರತ್‌ಗೌಡ, ಬೆಸ್ಟ್ ಬೌಲರ್ ಶಭರೀಶ್, ಎಮರ್ಜಿಂಗ್ ಪ್ಲೇಯರ್ ತೇಜಸ್ವಿ, ಬೆಸ್ಟ್ ವಿಕೆಟ್ ಕೀಪರ್ ಗೌರಿಶಂಕರ್, ಬೆಸ್ಟ್ ಕ್ಯಾಚರ್ ದಿಲನ್, ಹಿರಿಯ ಆಟಗಾರ ಹರೀಶ್‌ಗೌಡ, ಹೆಚ್ಚು ಸಿಕ್ಸರ್ ಜೀವನ್ ಗೌಡ, ಹೆಚ್ಚು ಬೌಂಡರಿ ಅಲೋಕ್ ಗೌಡ, ಉತ್ತಮ ಆಟಗಾರ ಪ್ರಶಸ್ತಿಯನ್ನು ಭರತ್‌ಗೌಡ ಪಡೆದುಕೊಂಡರು.
ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಹಾತೂರು ತಂಡ ಪ್ರಥಮ ಕೋತೂರುವಿನ ಮಾರಮ್ಮ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಹಾತೂರು ತಂಡ ಪ್ರಥಮ, ಕೋತೂರುವಿನ ಮಾರಮ್ಮ ತಂಡ ದ್ವೀತಿಯ ಸ್ಥಾನ ಪಡೆಯಿತು.
ಮಹಿಳೆಯರ ಥ್ರೋಬಾಲ್‌ನಲ್ಲಿ ಕೋಟೆಕೊಪ್ಪ ಪ್ರಥಮ, ಕಣ್ಣಂಗಾಲ ತಂಡ ದ್ವಿತೀಯ ಸ್ಥಾನ ಪಡೆಯಿತು.
ಮಹಿಳೆಯರಿಗೆ ಉದ್ದ ಜಡೆಯ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗದಿಂದ ಜನಾಂಗದವರು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಆಶಿಕ್, ಹೇಮಂತ್, ಸತೀಶ್, ಸುಮಂತ್, ಶರೀಫ್ ಕಾರ್ಯ ನಿರ್ವಹಿಸಿದರು.
ಒಕ್ಕಲಿಗರ ಯುವ ವೇದಿಕೆಯ ವಿರಾಜಪೇಟೆ ತಾಲೂಕು ಅಧ್ಯಕ್ಷ ವಿ.ಪಿ.ಡಾಲು, ನಿವೃತ್ತ ಗ್ರಾಮ ಲೆಕ್ಕಿಗ ವಿ.ಜಿ.ಗೋಪಾಲಕೃಷ್ಣ, ವಕೀಲ ಡಿ.ಎ.ಚಂದ್ರಶೇಖರ್, ಕಾರ್ಮಾಡು ಬೆಳೆಗಾರ ವಿ.ಎಸ್.ಸುಬ್ರಮಣಿ, ಕೋಟೆಕೊಪ್ಪ ಬೆಳೆಗಾರ ವಿ.ಎಲ್.ಸುರೇಶ್, ಜಯಸೂರ್ಯ ಫೈನಾನ್ಸ್ ಮಾಲೀಕ ವಿ.ಜೆ.ದಿನೇಶ್, ಬೆಳೆಗಾರ ಡಿ.ಎಸ್.ಕೀರ್ತಿ, ವಿ.ಕೆ.ಪ್ರದೀಪ್, ಎಚ್.ಜಿ.ಭವಿನ್, ವಿ.ಮಹೇಶ್, ಒಕ್ಕಲಿಗರ ಯುವ ವೇದಿಕೆ ಗೌರವ ಅಧ್ಯಕ್ಷ ವಿ.ಪಿ.ಲೋಹಿತ್ ಗೌಡ, ಉಪಾಧ್ಯಕ್ಷ ಕೆ.ಪಿ.ಅಜಿತ್, ಕಾರ್ಯದರ್ಶಿ ವಿ.ಟಿ.ಶ್ರೇಯಸ್, ಹಾರಂಗಿ ಜಲಾಶಯ ಸಲಹಾ ಸಮಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.