ಮಂಗಳೂರು: ನಟಿ ಶೋಭಿತಾ ಅವರೊಂದಿಗೆ ಅಪರಿಚಿತ ವ್ಯಕ್ತಿಗಳು ಕಾರಿಗೆ ಸ್ಥಳ ಬಿಡುವ ವಿಚಾರವಾಗಿ ಜಗಳ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ನಡೆದಿದೆ.
ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ಶೋಭಿತಾ ನಾಯಕಿಯಾಗಿ ನಟಿಸಿದ್ದಾರೆ. ಶೋಭಿತಾ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಾರಿನಿಂದ ಚಲಿಸಲು ತೊಂದರೆಯಾಯಿತು. ಈ ವೇಳೆ ಶೋಭಿತಾ ಅವರ ಕಾರಿನ ಚಾಲಕ ಸ್ಥಳ ಬಿಡುವಂತೆ ಎದುರಿನಿಂದ ಬಂದ ಕಾರು ಚಾಲಕನಲ್ಲಿ ಕೋರಿದರು. ಇದರಿಂದ ಆಕ್ರೋಶಗೊಂಡ ಅಪರಿಚಿತರ ಗುಂಪು ಕಾರಿನಿಂದ ಕೆಳಗೆ ಇಳಿದು ಜಗಳ ಆರಂಭಿಸಿತು. ಅಲ್ಲದೆ ಗುಂಪು ನಟಿ ಮೇಲೆ ಹಲ್ಲೆ ನಡೆಸಲು ಮುಂದಾಯಿತು. ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಪರಿಸ್ಥಿತಿ ಶಾಂತಗೊಳಿಸಿದರು. (ದಿಗ್ವಿಜಯ ನ್ಯೂಸ್)