ಎನ್.ವಿ.ವೆಂಕಟೇಶ್ ಗುಡಿಬಂಡೆ
ತಾಲೂಕಿನಲ್ಲಿ ತಲೆ ಎತ್ತಿರುವ ಕಲ್ಲು ಕ್ವಾರಿಗಳಲ್ಲಿ ಸ್ಫೋಟಕಗಳ ಅಬ್ಬರಕ್ಕೆ ಗ್ರಾಮೀಣ ಜನತೆ ತತ್ತರಿಸಿದ್ದಾರೆ. ಸಮಸ್ಯೆ ಬಿಗಡಾಯಿಸಿದ್ದರೂ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಸುಳಿಯದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ದಪ್ಪರ್ತಿ ಗ್ರಾಪಂ ವ್ಯಾಪ್ತಿಯ ಭತ್ತಲಹಳ್ಳಿ, ಹನುಮಂತಪುರ ಗ್ರಾಮಗಳಿಗೆ ಹೊಂದಿಕೊಂಡಿರುವ ಕಂತಾರ್ಲಹಳ್ಳಿ ಬಳಿ ಕಲ್ಲು ಕ್ವಾರಿಗಳು ತಲೆ ಎತ್ತಿದ್ದು, ಸಂಜೆ ವೇಳೆ ಮೀತಿಮೀರಿದ ಬ್ಲಾಸ್ಟಿಂಗ್ನಿಂದ ಊರೇ ನಡುಗುವ ಅನುಭವವಾಗುತ್ತಿದ್ದು, ಸಾಕಷ್ಟು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಭಯದಲ್ಲಿ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ನಿತ್ಯ ಧೂಳು, ಬೆಳೆ ಹಾನಿ: ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಹಾಗೂ ಕಲ್ಲುಹೊತ್ತು ಸಾಗುವ ಟಿಪ್ಪರ್ಗಳಿಂದ ಹೊರಬರುವ ಧೂಳಿನಿಂದ ಜಮೀನುಗಳಲ್ಲಿ ಬೆಳೆ ನಾಶವಾಗುತ್ತಿದೆ. ಅಲ್ಲದೇ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡಿದ ನಂತರ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಆದರೂ, ಸ್ಥಳಿಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಹದಗೆಟ್ಟ ರಸ್ತೆಗಳು: ಕ್ವಾರಿಗಳಿಂದ ನಿಗದಿಗಿಂತ ಹೆಚ್ಚು ಭಾರದ ಕಲ್ಲುಗಳನ್ನು ಹೊತ್ತು ಸಾಗುವ ಟಿಪ್ಪರ್ಗಳಿಂದಾಗಿ ರಸ್ತೆಗಳು ಗುಂಡಿ ಬೀಳುತ್ತಿದ್ದು, ಹಾಳಾಗುತ್ತಿವೆ. ಹನುಮಂತಪುರ ಗ್ರಾಮದ ತಿರುವು ರಸ್ತೆಯಂತೂ ಹೇಳತೀರದಷ್ಟು ಹದಗೆಟ್ಟಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ. ಆದರೂ, ಕ್ವಾರಿ ಮಾಲೀಕರು, ಸಂಬಂಧಪಟ್ಟ ಪಂಚಾಯಿತಿ, ಇಲಾಖೆ ಅಧಿಕಾರಿಗಳು ಮೌನವಾಗಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿದೆ.
ರೈತ ಸಂದ ಮುಖಂಡರು ನಾಪತ್ತೆ! : ಅನ್ನದಾತರ ಪರ ನಿಲ್ಲುತ್ತೇವೆ ಎಂದು ಹೇಳುವ ರೈತ ಸಂಗಳ ಮುಖಂಡರು ಕ್ವಾರಿಗಳಿಂದ ಗ್ರಾಮೀಣ ಜನರಿಗೆ ಸಮಸ್ಯೆ ಆಗುತ್ತಿದ್ದರೂ ಇತ್ತ ತಿರುಗಿಯೂ ನೋಡಿಲ್ಲ. ಸಂಟನೆ ಕಟ್ಟುವುದಾದರೂ ಏಕೆ ಎನ್ನುವು ಪ್ರಶ್ನೆ ಸಾಮಾನ್ಯ ರೈತರದ್ದಾಗಿದೆ.
ಗ್ರಾಮಕ್ಕೆ ಹೊಂದಿಕೊಂಡಂತೆ ಎರಡು ಕಲ್ಲು ಕ್ವಾರಿಗಳು ತಲೆ ಎತ್ತಿದ್ದು, ಪ್ರತಿದಿನ ಸಂಜೆ ಮಿತಿಮೀರಿದ ಬ್ಲಾಸ್ಟಿಂಗ್ ನಡೆಸುತ್ತಾರೆ. ಈ ಸಂದರ್ಭದಲ್ಲಿ ಗಬ್ಬುವಾಸನೆ ಜತೆಗೆ ಮನೆಯೊಳಗಿರುವ ಪಾತ್ರೆಗಳು ಬೀಳುತ್ತವೆ. ಗೋಡೆಗಳು ಬಿರುಕು ಬಿಟ್ಟಿವೆ. ಕ್ಷೇತ್ರದ ಜನಪ್ರತಿನಿಧಿಗಳು ಸಾಮಾನ್ಯಜನರ ಸಮಸ್ಯೆಗಳಿಗೆ ತಲೆಕಡಿಸಿಕೊಂಡಂತಿಲ್ಲ. | ಸಾಬೂಲಾಲ್ ಭತ್ತಲಹಳ್ಳಿ ಗ್ರಾಮಸ್ಥ ಮಿತಿಮೀರಿದ ಟಿಪ್ಪರ್ಗಳ ಸಂಚಾರ ದಿಂದ ಹೆಚ್ಚು ಧೂಳು ಬರುತ್ತಿದ್ದು, ಬೆಳೆಗಳು ನಾಶವಾಗುತ್ತಿವೆ. ಈ ಬಗ್ಗೆ ತಹಸೀಲ್ದಾರ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. | ಫಕ್ರುದ್ದೀನ್, ಭತ್ತಲಹಳ್ಳಿ