ಜಿಲ್ಲೆ

ಮಂಗಳೂರು-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ವಿಶೇಷ ರೈಲು ಸಂಚಾರ

arunakunigal

ಮಂಗಳೂರು: ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್​ ಮತ್ತು ಬೆಂಗಳೂರು ಸಿಟಿ ಜಂಕ್ಷನ್​ ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್​ 31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಆಗಿರುವುದರಿಂದ ಮಂಗಳೂರು- ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ರೈಲ್ವೆ ಮಂಡಳಿ ಈ ಮೂಲಕ ಸ್ಪಂದಿಸಿದೆ.

ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ..

ಕೆಂಗೇರಿ- ರಾತ್ರಿ 8.49

ರಾಮನಗರ- ರಾತ್ರಿ 9.13

ಚನ್ನರಾಯಪಟ್ಟಣ- ರಾತ್ರಿ 9.24

ಮಂಡ್ಯ- ರಾತ್ರಿ 9.54

ಮೈಸೂರು ಜಂಕ್ಷನ್​- ರಾತ್ರಿ 11

ಕೃಷ್ಣರಾಜನಗರ- ರಾತ್ರಿ 11.49

ಹೊಳೆನರಸಿಪುರ- ರಾತ್ರಿ 12.43

ಹಾಸನ- ರಾತ್ರಿ 1.35

ಸಕಲೇಶಪುರ- ಬೆಳಗಿನಜಾವ 3

ಸುಬ್ರಹ್ಮಣ್ಯ ರೋಡ್​- ಬೆಳಗ್ಗೆ 6.10

ಕಬಕಪುತ್ತೂರು- ಬೆಳಗ್ಗೆ 7

ಬಂಟ್ವಾಳ- ಬೆಳಗ್ಗೆ 7.30

ಪಡೀಲ್-​ ಬೆಳಗ್ಗೆ 8.25

ಮಂಗಳೂರು ಸೆಂಟ್ರಲ್- ಬೆಳಗ್ಗೆ​ 09.05

ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ...

ಮಂಗಳೂರು ಜಂಕ್ಷನ್- ಸಂಜೆ​ 6.48

ಪಡೀಲ್​- ಸಂಜೆ 7.10

ಬಂಟ್ವಾಳ- ಸಂಜೆ 7.20

ಕಬಕಪುತ್ತೂರು- ಸಂಜೆ 7.48

ಸುಬ್ರಹ್ಮಣ್ಯ ರೋಡ್​- ರಾತ್ರಿ 8.40

ಸಕಲೇಶಪುರ- ರಾತ್ರಿ 9.20

ಹಾಸನ- ಮಧ್ಯರಾತ್ರಿ 12.25

ಹೊಳೆನರಸಿಪುರ- ಮಧ್ಯರಾತ್ರಿ 1.13

ಕೃಷ್ಣರಾಜನಗರ- ರಾತ್ರಿ 2.08

ಮೈಸೂರು ಜಂಕ್ಷನ್​- ಬೆಳಗಿನ ಜಾವ 3

ಮಂಡ್ಯ- ಬೆಳಗಿನ ಜಾವ 3.54

ಚನ್ನರಾಯಪಟ್ಟಣ- ಬೆಳಗಿನಜಾವ 4.30

ರಾಮನಗರ- ಬೆಳಗಿನಜಾವ 4.42

ಕೆಂಗೇರಿ- ಬೆಳಗಿನಜಾವ 5.11

ಬೆಂಗಳೂರು ಸಿಟಿ ಜಂಕ್ಷನ್​- ಬೆಳಗ್ಗೆ 6.15

ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್​ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಯಾವ ದಿನ ಸಂಚಾರ?: ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜುಲೈ 27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್​ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್​ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.