ಹಳೇಬೀಡು: ಇಲ್ಲಿನ ಹೊಯ್ಸಳೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯ ವೈಭವದಿಂದ ಜರುಗಿತು.
ವಿಶೇಷ ಪೂಜೆ ಪ್ರಯುಕ್ತ ಮೂಲ ಹೊಯ್ಸಳೇಶ್ವರ ಲಿಂಗಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ ಹಾಗೂ ಮಹಾಮಂಗಳಾರತಿ ಸೇವೆ ನೆರವೇರಿತು. ಜಾಗರಣೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡಿದರು.
ಮೊದಲ ಜಾವದ ಪೂಜೆ ಬಳಿಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಮೂಲ ದೇವರ ದರ್ಶನ ಮಾಡಿದ ಭಕ್ತರು, ತೀರ್ಥ-ಪ್ರಸಾದ ಸ್ವೀಕರಿಸಿದರು. ಶನಿವಾರ ಪ್ರಾತಃಕಾಲದಲ್ಲಿ ಮಹಾನೈವೇದ್ಯ, ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ದೇವಾಲಯದ ಅರ್ಚಕರು, ಆಗಮಿಕರು, ಮುಜರಾಯಿ ಇಲಾಖೆ ಸಿಬ್ಬಂದಿ ಮತ್ತು ಪುರಾತತ್ವ ಇಲಾಖೆಯ ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ವಿವಿಧೆಡೆ ಆಚರಣೆ: ಸಮೀಪದ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಹುಲಿಕಲ್ ವೀರಭದ್ರಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು.
ಲಿಂಗವನ್ನು ಬೆಳ್ಳಿ ನಾಗಾಭರಣದಲ್ಲಿ ಹಾಗೂ ವೀರಭದ್ರೇಶ್ವರ ಉದ್ಭವ ಲಿಂಗಕ್ಕೆ ರುದ್ರಾಕ್ಷಿ ಅಲಂಕಾರ ಮಾಡಲಾಗಿತ್ತು. ದೇಗುಲ ಸಮಿತಿ ಸದಸ್ಯರಾದ ಗ್ರಾನೈಟ್ ರಾಜಶೇಖರ್, ಸೋಮಸುಂದರ್, ಕಾರ್ಯದರ್ಶಿ ಸಂಗಮ್ ಹಾಜರಿದ್ದರು. ಪಟ್ಟಣದ ಇತರ ಪ್ರಮುಖ ಶಿವಾಲಯಗಳಾದ ಕರಗಲ್ಲು ರುದ್ರೇಶ್ವರ, ಕಲ್ಮಠ, ಕುಂಬಳೇಶ್ವರ ದೇಗುಲದಲ್ಲೂ ವಿಶೇಷ ಪೂಜೆಗಳು ಜರುಗಿದವು.