ಮಂಗಳೂರು: ಭಾರತದ ಮುಂಚೂಣಿ ಡ್ರೈ ಫೂಟ್ಸ್ ಆ್ಯಂಡ್ ನಟ್ಸ್ ಬ್ರಾಂಡ್ ಆಗಿರುವ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಹಾಗೂ ಅಮೇರಿಕನ್ ಪೆಕನ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಬೋಲಾಸ್ ಬನಶಂಕರಿ ಮಳಿಗೆಯಲ್ಲಿ ಸಂವಾದಾತ್ಮಕ ಕಾರ್ಯಾಗಾರ ನಡೆಯಿತು.
ವಿಶೇಷ ಪೆಕನ್ ಕಾರ್ಯಾಗಾರದಲ್ಲಿ ಖ್ಯಾತ ಶ್ೆ ನೇಹಾ ದೀಪಕ್ ಶಾ ಪ್ರಮುಖ ಆಕರ್ಷಣೆಯಾಗಿದ್ದು, ಯಶಸ್ಸು, ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಸಂವಾದಾತ್ಮಕ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಖ್ಯಾತ ಶ್ೆ ನೇಹಾ ದೀಪಕ್ ಶಾ, ಪೆಕಾನ್ಸ್ ಕೇವಲ ರುಚಿಕರವಲ್ಲ; ಅವು ಆರೋಗ್ಯಕರ ಕೊಬ್ಬಿನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಮಾನವನ ಆರೋಗ್ಯಕ್ಕೆ ಬೇಕಾದ ಜೀವಸತ್ವಗಳು, ಪೌಷ್ಠಿಕಾಂಶಗಳು ಇದರಲ್ಲಿ ಲಭ್ಯ. ಇದರಲ್ಲಿ ದೇಹಕ್ಕೆ ಗತ್ಯವಿರುವ ಶಕ್ತಿವರ್ದಕಗಳು, ಮಿನರಲ್ಸ್, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳ ಅಪಾರ ಪ್ರಮಾಣವಿದೆ. ಈ ಕಾರ್ಯಾಗಾರದ ಮೂಲಕ ಪೆಕಾನ್ಸ್ ಬಗ್ಗೆ ಜನರಿಗೆ ಮಾಹಿತಿ ತಲುಪಬೇಕು. ಈ ಮೂಲಕ ಜನರು ವಿಶೇಷ ಆಹಾರ ಕ್ರಮಗಳನ್ನು ಸೃಜನಾತ್ಮಕ ಮತ್ತು ಸುಲಭವಾದ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಪ್ರಮುಖ ಅಥಿತಿಗಳಾಗಿ ಆರ್.ಜೆ.ಪುನೀತ ಆಚಾರ್ಯ, ನಯನಾ ಕೆ.ಎಂ. ಜೀವಿತಾ ಜಗದೀಶ್, ಅಶ್ವತಿ ಬಾಲಕೃಷ್ಣನ್, ಗರಿಮಾ ಬನ್ಸಾಲ್ ಮತ್ತು ಕುಸುಮಾ ರಾಜಣ್ಣ ಅವರು ಪೆಕನ್‌ಆಧಾರಿತ ಡಬಲ್ ಚಾಕೊಲೇಟ್ ಪೆಕನ್ ಮಫಿನ್ಸ್ ಮತ್ತು ಪೆಕನ್ ಸಲಾಡ್ ಪಾಕವಿಧಾನ ನಿರೂಪಿಸಿದರು.
--------------
ಡಿ.31ರ ವರೆಗೆ ಬೋಲಾಸ್ ವಿಶೇಷ ಕೊಡುಗೆ
ಅಮೆರಿಕನ್ ಪೆಕನ್ ಸಹಯೋಗದೊಂದಿಗೆ ಬೋಲಾಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಡಿ.15ರಿಂದ ಡಿಸೆಂಬರ್ 31ರ ವರೆಗೆ ರೂ.800 ಕ್ಕಿಂತ ಹೆಚ್ಚಿನ ಖರೀದಿಗಳ ಮೇಲೆ ಸಾಲ್ಟೆಡ್ ಪೆಕನ್ ನಟ್ಸ್ ಮಾದರಿ ಪ್ಯಾಕ್ ಪಡೆಯಬಹುದು. ಭಾರತದ ಎಲ್ಲಾ ಬೋಲಾಸ್ ಸ್ಟೋರ್‌ಗಳಲ್ಲಿ ಕೇವಲ ರೂ.100 ಕ್ಕೆ 50 ಗ್ರಾಂ ಸಾಲ್ಟೆಡ್ ಪೆಕನ್ ಪ್ಯಾಕ್ ಅನ್ನು ರಿಯಾಯಿತಿದರದಲ್ಲಿ ನೀಡಲಾಗುತ್ತಿದೆ. ಒಂದು ಬ್ರಾಂಡ್ ಆಗಿ ನಮ್ಮ ಪ್ರಾಥಮಿಕ ಗಮನವು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶವನ್ನು ಕೈಗೆಟುಕುವ ದರದಲ್ಲಿ ನೀಡುವುದು. ಪ್ರತಿಯೊಂದು ಉತ್ಪನ್ನವು ಅದರ ತಾಜಾತನ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಖರವಾಗಿ ಪ್ಯಾಕ್ ಮಾಡಲ್ಪಟ್ಟಿದೆ ಎಂದು ಬೋಲಾಸ್ ಸಂಸ್ಥೆ ನಿರ್ದೇಶಕರಾದ ರಜತ್ ಕಾಮತ್ ಬೋಲಾ ತಿಳಿಸಿದ್ದಾರೆ.
----------------
ಬೋಲಾಸ್‌ನಿಂದ ಗುಣಮಟ್ಟದ ಸೇವೆ
ಚೋಳಾಸ್ ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳೊಂದಿಗೆ ಗ್ರಾಹಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ನಗರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಈ ಮಳಿಗೆಗಳು ಗ್ರಾಹಕರಿಗೆ ಕಾರ್ಖಾನೆಯ ನೇರ ಬೆಲೆಯಲ್ಲಿ ಗುಣಮಟ್ಟದ ನಟ್ಸ್‌ಗಳನ್ನು ನೀಡಲಿದೆ. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದು ವಿಶೇಷ. ಪಿಸ್ತಾದಿಂದ ಗೋಡಂಬಿವರೆಗೆ ಹಲವು ವಿಧದ ಡ್ರೈ ಫೂಟ್ಸ್ ಆ್ಯಂಡ್ ನಟ್ಸ್‌ಗಳು ಮಳಿಗೆಯಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿ 20 ಮಳಿಗೆಗಳಿವೆ. ಬೋಲಾಸ್ ಮಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಮಳಿಗೆಗಳನ್ನು ಹೊಂದಿದೆ. ಚಿಕ್ಕಮಗಳೂರು, ಉಡುಪಿ, ಕುಂದಾಪುರ, ಬೆಳಗಾವಿ, ಕಾರವಾರ, ತುಮಕೂರು, ಶಿವಮೊಗ್ಗ, ಕಲಬುರ್ಗಿ, ಹೊಸಪೇಟೆ, ದಾವಣಗೆರೆ, ಮಂಡ್ಯ, ಹಾಸನ, ರಾಯಚೂರು, ಬಾಗಲಕೋಟೆ, ಚನ್ನಪಟ್ಟಣ, ರಾಣೆಬೆನ್ನೂರು, ಚಿತ್ರದುರ್ಗ, ಕನಕಪುರ ಮತ್ತು ಇನ್ನೂ ಅನೇಕ ನಗರಗಳಲ್ಲಿದೆ. ಸಿಹಿ ತಿನಿಸುಗಳು ಕೂಡ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಬೋಳಾಸ್ ಆಗ್ರೋ ತನ್ನ ಮಳಿಗೆಗಳಲ್ಲಿ ನಟ್ಸ್‌ಗಳು, ಒಣ ಹಣ್ಣುಗಳು, ಖರ್ಜೂರ, ಒಣಗಿದ ಬೆರ್ರಿಗಳು, ಜೇನುತುಪ್ಪ, ಕೇಸರಿ, ಕೋಲ್ಡ್ ಪ್ರೆಸ್ ಮತ್ತು ಸಂಸ್ಕರಿಸಿದ ಎಣ್ಣೆಗಳು ಮತ್ತು ಸಿಹಿತಿಂಡಿಗಳನ್ನು ಹೊಂದಿದೆ.