ಜಿಲ್ಲೆ

ಸರ್ಕಾರಿ ಶಾಲೆಗಳ ಉಳಿವಿಗೆ ವಿಶೇಷ ಅಭಿಯಾನ

ನರಗುಂದ: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಉಳಿವಿಗೆ ನರಗುಂದ ಪಟ್ಟಣದಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾದ್ಯಕ್ಷ ಶರಣು ಎಸ್. ಗೋಡಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘಟನೆ ನರಗುಂದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡ ಭಾಷೆ ಬೆಳವಣಿಗೆ ಆಗಬೇಕು. ನರಗುಂದ ನೀರಾವರಿ ಇಲಾಖೆ, ಎಸ್​ಸ್ಸಿ,ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುವ ವಸತಿ ಶಾಲೆಗಳ ಸ್ಥಿತಿ ಅಧೋಗತಿಯಲ್ಲಿವೆ. ಫಸಲ್ ಬಿಮಾ ಯೋಜನೆಯಲ್ಲಿ ಎಜೆಂಟರುಗಳು ಕಮೀಷನ್​ಗಾಗಿ ತಮಗೆ ಅನುಕೂಲಕರವಾದ ಬೆಳೆಗಳನ್ನು ನಮೂದಿಸಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಈಗಾಗಲೇ ಮನವಿ ನೀಡಿ ಸಮಸ್ಯೆ ಪರಿಹಾರಗೊಳಿಸಲು ವಿನಂತಿಸಲಾಗಿದೆ. ಕನ್ನಡ ಶಾಲೆ, ಕಾಲೇಜ್​ಗಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಅವುಗಳನ್ನು ಉಳಿಸಿ, ಬೆಳೆಸುವ ಹಲವಾರು ಜಟಿಲ ಸಮಸ್ಯೆಗಳ ಪರಿಹಾರಕ್ಕಾಗಿ ಆಗಸ್ಟ್ ಮೊದಲ ವಾರದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನರಗುಂದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿನಾಯಕ ಛತ್ರಭಾವಿ, ಉಪಾಧ್ಯಕ್ಷ ಕೌಶಿಕ್ ಹಿರೇಮಠ, ಕಾರ್ಯದರ್ಶಿ ಬಸವರಾಜ ಭೋಸಲೆ, ಯುವ ಘಟಕದ ಉಪಾಧ್ಯಕ್ಷ ಸಾಗರ ವಡ್ಡಿಗೇರಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಕಾವ್ಯಾ ಹುಂಬಿ ಅವರನ್ನು ಆಯ್ಕೆ ಮಾಡಲಾಯಿತು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಇಸ್ಲಾಯಿಲ್ ಆಡೂರ, ಜಿಲ್ಲಾ ಉಪಾಧ್ಯಕ್ಷ ಅಜಯ ಕಂಬಳಿ, ನಗರ ಘಟಕದ ಅಧ್ಯಕ್ಷ ನಂದೀಶಗೌಡ ಹುಡೇದಮನಿ, ರುದ್ರೇಶ ಬಿ.ಎಂ, ಡಾ. ಕಾರ್ತಿಕ ಹಿರೇಮಠ, ಪ್ರವೀಣ ತಳವಾರ, ಶಿವು ಚುಳಕಿ, ಮುತ್ತು ತಡಸಿ, ರಮೇಶ ತಡಸಿ, ಇಸಾಕ್ ಕಿಲ್ಲೇದಾರ, ನಾಗನಗೌಡ ಪಾಟೀಲ, ಜಾವೇದ ಮುಲ್ಲಾ, ಗುರುಕುಮಾರ ಮಾಲ್ಕಿಪಾಟೀಲ, ಶಿವಬಸಯ್ಯ ಹಿರೇಮಠ, ಆನಂದ ಗುಲಗಂಜಿ, ವಿನೋದ ಕದಂ, ಗುರುನಾಥ ವಣ್ಣನವರ, ನಾಗರಾಜ ಭಂಗಿ, ಇತರರಿದ್ದರು.