ಜಿಲ್ಲೆ

ಸೂಪರ್​ಫಾಸ್ಟ್​​​ ಆಗಿ ಬದಲಾದ 8 ಎಕ್ಸ್​ಪ್ರೆಸ್​ ರೈಲುಗಳು

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು 8 ಎಕ್ಸ್​ಪ್ರೆಸ್​ ರೈಲುಗಳನ್ನು ಸೂಪರ್​ಫಾಸ್ಟ್​ ರೈಲುಗಳನ್ನಾಗಿ ಬದಲಾಯಿಸಿದೆ.

ಯಶವಂತಪುರ-ಅಹ್ಮದಾಬಾದ್​, ಅಹ್ಮದಾಬಾದ್-ಯಶವಂತಪುರ, ಮೈಸೂರು-ವಾರಾಣಸಿ, ವಾರಾಣಸಿ- ಮೈಸೂರು, ಮೈಸೂರು-ರೇಣಿಗುಂಟ, ರೇಣಿಗುಂಟ-ಮೈಸೂರು ಮೇಲ್​ ಎಕ್ಸ್​ಪ್ರೆಸ್​ ರೈಲುಗಳು ಇದೇ ಅಕ್ಟೋಬರ್​ನಿಂದ ಸೂಪರ್​ಫಾಸ್ಟ್​​ ರೈಲುಗಳಾಗಿ ಸಂಚರಿಸುತ್ತಿವೆ. ಈ ರೈಲುಗಳು ಈ ಮೊದಲಿನ ಸಂಖ್ಯೆಗಳನ್ನು ಬದಲಾಯಿಸಿ, ಹೊಸ ಸಂಖ್ಯೆಗಳೊಂದಿಗೆ 2023ರ ಜನವರಿಯಿಂದ ಸಂಚರಿಸಲಿವೆ.

ಯಶವಂತಪುರ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ -ಯಶವಂತಪುರ ಮೇಲ್​ ಎಕ್ಸ್​ಪ್ರೆಸ್​ ರೈಲು ಕ್ರಮವಾಗಿ ಕಳೆದ ಆ.5 ಮತ್ತು 6ರಿಂದ ಸೂಪರ್​ಫಾಸ್ಟ್​ ರೈಲುಗಳಾಗಿ ಸಂಚಾರ ಪ್ರಾರಂಭಿಸಿವೆ. ಈ ರೈಲುಗಳು ಸಂಖ್ಯೆಗಳ ಬದಲಾವಣೆಯೊಂದಿಗೆ ಕ್ರಮವಾಗಿ ನ.18 ಮತ್ತು 19ರಂದು ಸಂಚಾರ ಪ್ರಾರಂಭಿಸಲಿವೆ. ಇನ್ನುಳಿದಂತೆ ಕೆಲ ರೈಲುಗಳ ಸಮಯವನ್ನು ಬದಲಾಯಿಸುವ ಮೂಲಕ ಅವುಗಳಿಗೆ ವೇಗ ನೀಡಲಾಗಿದೆ. ಆ ಮೂಲಕ ಒಟ್ಟು 54 ರೈಲುಗಳಿಗೆ ಇನ್ನಷ್ಟು ವೇಗ ಸಿಕ್ಕಿದೆ.