ಜಿಲ್ಲೆ

ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ಸೈನಿಕನಿಗೆ ಅದ್ದೂರಿ ಸ್ವಾಗತ


  • ರಸೀಕೆರೆ (ಗ್ರಾಮಾಂತರ): ವಾಯು ಸೇನೆಯ ಗಡಿಭದ್ರತಾ ಪಡೆಯಲ್ಲಿ 21 ವರ್ಷ ದೇಶ ಸೇವೆ ಮಾಡಿ ಸೋಮವಾರ ಹುಟ್ಟೂರಿಗೆ ಆಗಮಿಸಿದ ಕುರುಬರಹಳ್ಳಿ ತಾಂಡ್ಯದ ಜಗದೀಶ್ ನಾಯಕ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಸಮಾವೇಶಗೊಂಡ ಜನರು ಹಾಗೂ ಕುಟುಂಬಸ್ಥರು, ಪುಷ್ಪಾರ್ಚನೆ ನೆರವೇರಿಸಿ ಬರ ಮಾಡಿಕೊಂಡರು.
    ತಾಲೂಕು ಮಾಜಿ ಸೈನಿಕರ ಸಮನ್ವಯ ಸಮಿತಿ, ಬಣಜಾರ್ ಸಮಾಜ ಹಾಗೂ ಕರವೇ ವೇದಿಕೆಯಿಂದ ಪ್ರೀತಿ, ಗೌರವದಿಂದ ಆಹ್ವಾನಿಸಿದರು. ನಗರದ ಮಾರ್ಗವಾಗಿ ವಿಶೇಷ ಕಲಾತಂಡಗಳ ಮೂಲಕ ಮೆರವಣಿಗೆ ಮಾಡಲಾಯಿತು.
    ಮಾಜಿ ಸೈನಿಕ ಭೀಮಾನಾಯಕ್, ಮಂಜುನಾಥ್ ಕಿರಣ್ ಕುಮಾರ್, ಮುದುಡಿ ಗಂಗಾಧರ್ ಇತರರು ಇದ್ದರು.