ಜಿಲ್ಲೆ

ನೇಣು ಬಿಗಿದುಕೊಂಡು ಯೋಧ ಆತ್ಮಹತ್ಯೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ರಜೆಯ ಮೇಲೆ ಆಗಮಿಸಿದ್ದ ಬಿಎಸ್​ಎ್​ ಯೋಧ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಟನೆ ಇಲ್ಲಿನ ವಿಜಯನಗರದಲ್ಲಿ ಬುಧವಾರ ನಡೆದಿದೆ. ಮೂಲತ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್​ ಗ್ರಾಮದ 45 ವರ್ಷದ ಬಿಎಸ್​ಎ್​ ಹವಾಲ್ದಾರ ದಗಡು ಮಹಾದೇವ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಪ್ರಸ್ತುತ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ 170ನೇ ಬಟಾಲಿಯನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ನಗರದ ಕ್ಯಾಂಪ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ನಗರ ಪೊಲೀಸ್​ ಆಯುಕ್ತ ಭೂಷನ್​ ಬೋರಸೆ ತಿಳಿಸಿದ್ದಾರೆ.