ಜಿಲ್ಲೆ

ಒಂಟಿ ಮಹಿಳೆ ರಕ್ಷಿಸಿದ ಪೊಲೀಸರು

ಶಿಕಾರಿಪುರ: ಶಿರಾಳಕೊಪ್ಪ ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ತಿರುಗಾಡುತ್ತಿದ್ದ ನಲವತ್ತರ ಆಸುಪಾಸಿನ ಮಹಿಳೆಯನ್ನು ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಹಿಳೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಿಎಸ್‌ಐ ಮಂಜುನಾಥ್ ಕುರಿ ಮತ್ತು ಹೆಡ್ ಕಾನ್‌ಸ್ಟೆಬಲ್ ಕುಸುಮಾ ಅವರು ಎನ್‌ಜಿಒ ಜತೆ ಮಹಿಳೆಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ, ಆಕೆ ಸಂಬಂಧಿಗಳ, ಪರಿಚಿತರ ಮಾಹಿತಿ ಸಮರ್ಪಕವಾಗಿ ನೀಡಲಿಲ್ಲ. ಮಹಿಳೆ 40 ಆಸುಪಾಸಿನಲ್ಲಿ ಇರುವುದರಿಂದ ಆಕೆಗೆ ಮುಂದೆ ತಿರುಗಾಡುತ್ತಿರುವಾಗ ತೊಂದರೆ ಆಗಬಾರದೆಂಬ ಕಾರಣಕ್ಕೆ ಮತ್ತು ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗದ ಸಖಿ ಕೇಂದ್ರಕ್ಕೆ ಕರೆತಂದು ಆಪ್ತ ಸಮಾಲೋಚನೆ ನಡೆಸಲಾಯಿತು. ನಂತರ ಸುರಭಿ ಸ್ವಾಧಾರ ಗೃಹ ಕೇಂದ್ರಕ್ಕೆ ಬಿಟ್ಟು ಬರಲಾಯಿತು.