ಗುಳೇದಗುಡ್ಡ ಮರಡಿಮಠಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿ ಅಭಿನವ ಕಾಡಸಿದ್ದೇಶ್ವರ ಶ್ರೀಗಳನ್ನು ಸನ್ಮಾನಿಸಿದರು. 
ಜಿಲ್ಲೆ

ನಾಗರಿಕರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ

ಗುಳೇದಗುಡ್ಡ : ಗುಳೇದಗುಡ್ಡ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ಬೇಡಿಕೆಗಳನ್ನು ಇಲ್ಲಿನ ಜನರು ನನ್ನ ಮುಂದೆ ಇಟ್ಟಿದ್ದು, ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸ್ಥಳೀಯ ಮುರುಘಾಮಠಕ್ಕೆ ಶುಕ್ರವಾರ ಭೇಟಿ ನೀಡಿ ಕಾಶೀನಾಥ ಸ್ವಾಮಿಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಬಿ.ಬಿ. ಚಿಮ್ಮನಕಟ್ಟಿ ಅವರು ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಅದರಂತೆ ನನ್ನ ಮೇಲೆ ನೀವು ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ಪಟ್ಟಣದ ವಿವಿಧ ಮಠಗಳಿಗೆ ಭೇಟಿ ನೀಡಿದ ಶಾಸಕರು ಶ್ರೀಗಳಿಂದ ಆಶೀರ್ವಾದ ಪಡೆದರು.

ಶ್ರೀ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು, ಅಕ್ಕಲಕೋಟೆಯ ಶರಣರಮಠದ ಚಿಕ್ಕರೇವಣಸಿದ್ದ ಸ್ವಾಮಿಗಳು, ಮುರುಘಾಮಠದ ಕಾಶೀನಾಥ ಶ್ರೀಗಳು, ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಕೋಟೆಕಲ್ಲನ ಹೊಳೆಹುಚ್ಚೇಶ್ವರ ಸ್ವಾಮಿಗಳನ್ನು ಶಾಸಕರು ಸನ್ಮಾನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಶಿವನಯ್ಯ ಮಳ್ಳಿಮಠ, ವೈ.ಆರ್. ಹೆಬ್ಬಳ್ಳಿ, ಪ್ರಕಾಶ ಮುರಗೋಡ, ಜಮೀರ ಮೌಲ್ವಿ, ನಾಗೇಶ ಪಾಗಿ, ಸತ್ಯಪ್ಪ ಜೋಗಿನ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ರಾಜು ಹೆಬ್ಬಳ್ಳಿ, ಹನುಮಂತ ಅಪ್ಪಣ್ಣವರ, ರಜಾಕ ರಾಜೂರ, ಹಾಲಯ್ಯ ಇತರರು ಇದ್ದರು.