Oplus_0ಯಳಂದೂರು ಪಟ್ಟಣದಲ್ಲಿ ಆಯೋಜಿಸಿದ್ದ ವಿಶ್ವ ಪೋಲಿಯೋ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಜಾಥಾ ಗಮನ ಸೆಳೆಯಿತು. ವೈ.ಜಿ.ನಿರಂಜನಸ್ವಾಮಿ, ಪುಟ್ಟರಾಜು, ಗೌಡಹಳ್ಳಿ ರವಿ ಇದ್ದರು.  
ಜಿಲ್ಲೆ

ಪೋಲಿಯೋ ನಿರ್ಮೂಲನೆಗೆ ಪ್ರಾಮಾಣಿಕ ಯತ್ನ

ಅಭಿನಯ್ ಎಚ್.ಎಂ

ಯಳಂದೂರು: ರೋಟರಿ ಕ್ಲಬ್ ವಿಶ್ವಮಟ್ಟದಲ್ಲಿ ಪೋಲಿಯೋವನ್ನು ಬುಡಸಮೇತ ನಿರ್ಮೂಲನೆಗೊಳಿಸಲು ಪಣ ತೊಟ್ಟಿದ್ದು, ಇದಕ್ಕಾಗಿ ನಿರಂತವಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದೆ ಎಂದು ರೋಟರಿ ಕ್ಲಬ್ ಆಫ್ ಗ್ರೀನ್‌ವೇ ತಾಲೂಕು ಅಧ್ಯಕ್ಷ ವೈ.ಜಿ.ನಿರಂಜನ್ ತಿಳಿಸಿದರು.

ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ರೋಟರಿ ಕ್ಬನ್ ಆಫ್ ಗ್ರೀನ್‌ವೇ, ಎಸ್‌ಡಿವಿಎಸ್, ಸಿದ್ದಾರ್ಥ ಶಾಲೆ, ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಪೋಲಿಯೋ ಒಂದು ಮಾರಣಾಂತಿಕ ಕಾಯಿಲೆ. ಈ ಅಭಿಯಾನಕ್ಕೂ ಮುಂಚೆ ವಿಶ್ವದಾದ್ಯಂತ ಕೋಟ್ಯಂತರ ಮಕ್ಕಳು ಈ ರೋಗದಿಂದ ಬಳಲುತ್ತಿದ್ದರು. ಇದನ್ನು ಮನಗಂಡ ರೋಟರಿ ಕ್ಲಬ್ ಈ ಕಾಯಿಲೆಯನ್ನು ವಿಶ್ವದಿಂದ ದೂರವಿಡಬೇಕೆಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ವಿಶ್ವಸಂಸ್ಥೆ ಸಹಯೋಗದಲ್ಲಿ ಇದರಲ್ಲಿ ಯಶಸ್ಸು ಕೂಡ ಸಾಧಿಸಿದೆ ಎಂದರು.

ಪಾಕಿಸ್ತಾನ, ಆಪ್ಘಾನಿಸ್ತಾನದಲ್ಲಿ 23 ಪೋಲಿಯೋ ರೋಗಿಗಳಿದ್ದಾರೆ. ಇದೂ ನಿರ್ಮೂಲನೆಗೊಂಡರೆ ವಿಶ್ವ ಪೋಲಿಯೋಮುಕ್ತವಾಗುತ್ತದೆ. ಈ ಶ್ರೇಯ ರೋಟರಿ ಸಂಸ್ಥೆಗೆ ಸೇರುತ್ತದೆ. ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆಗೆ ಈವರೆಗೂ 600 ಮಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಿದೆ. ಈಗ ಮಲೇರಿಯಾ ನಿರ್ಮೂಲನೆಗೆ 20 ಲಕ್ಷ ಡಾಲರ್ ಯೋಜನೆ ರೂಪಿಸಿ ಕೆಲಸ ಮಾಡುತ್ತಿದೆ. ಶೇ.80 ರಷ್ಟು ಈ ರೋಗವೂ ನಿರ್ಮೂಲನೆಯಾಗಿದೆ. ಜತೆಗೆ ಭಾರತದಲ್ಲಿ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ, ಕೆಲಸ ಪಡೆದುಕೊಳ್ಳಲು ಪೂನಾದಲ್ಲಿ 2 ವರ್ಷ ತರಬೇತಿ ನೀಡುವ ಕಾಲೇಜನ್ನು ತೆರೆದಿದೆ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಪುಟ್ಟರಾಜು ಖಜಾಂಚಿ ಗೌಡಹಳ್ಳಿ ರವಿ, ವೈ.ಕೆ.ಮೋಳೆ ನಾಗರಾಜು, ನಟರಾಜು, ಬಿ.ಟಿ.ಶ್ರೀನಿವಾಸ್, ಶಿವಕುಮಾರ್, ಗಣಿಗನೂರು ಬಂಗಾರು, ರುದ್ರಯ್ಯ, ಪ್ರಕಾಶ್, ಬಿ.ಟಿ.ಶ್ರೀನಿವಾಸ, ನಟರಾಜು, ಮಹದೇವಶೆಟ್ಟಿ, ಶಿಕ್ಷಕ ಹೆಗ್ಗವಾಡಿ ಮಹದೇವ ಸೇರಿದಂತೆ ಅನೇಕರು ಇದ್ದರು.