ಜಿಲ್ಲೆ

ಮೌನ ಪ್ರತಿಭಟನಾ ಮೆರವಣಿಗೆ

ಮರಿದೇವ ಹೂಗಾರ

ಹುಬ್ಬಳ್ಳಿ: ಶಿಷ್ಯವೇತನ ಹೆಚ್ಚಳ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರ ಸಂಘ ವತಿಯಿಂದ ನಗರದ ಕಿಮ್ಸ್ ಆವರಣದಲ್ಲಿ ಮಂಗಳವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.
ಶಿಷ್ಯವೇತನ ನಾಲ್ಕು ವರ್ಷದಿಂದ ಹೆಚ್ಚಳವಾಗಿಲ್ಲ. ಶಿಷ್ಯವೇತನಕ್ಕೂ ಮತ್ತು ಶುಲ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸರ್ಕಾರಿ ವೈದ್ಯರು ಮಾಡುವ ಕೆಲಸಕ್ಕೆ ಸರಿಸಮಾನವಾಗಿ ಕರ್ತವ್ಯ ನಿರ್ವಹಿಸಿದರೂ ನಮ್ಮನ್ನು ನಿರ್ಲಕ್ಷೃ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳು, ಬೆಳಗ್ಗೆಯಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸಿದರು.
ಕೆಲಸದ ಅವಧಿ ಮುಗಿದ ನಂತರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿಷ್ಯ ವೇತನ ಹೆಚ್ಚಳ ಮಾಡಬೇಕು. ಶುಲ್ಕಕ್ಕೆ ಸರಿಸಮನಾಗಿ ಶಿಷ್ಯವೇತನ ಕೊಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಡಾ. ಅಂಬರೀಶ ಟೋಕ್ರೆ, ಉಪಾಧ್ಯಕ್ಷರಾದ ಡಾ. ಸತೀಶ ಹುಲ್ಲೂರ, ಡಾ. ಅಕ್ಷಯ ಪಾಲೇಕರ, ಪದಾಧಿಕಾರಿಗಳಾದ ಡಾ. ಅಭಿನಂದನ ಸುಭಾಷ, ಡಾ. ವರ್ಷಾ, ಡಾ. ವೈಷ್ಣವಿ ಕಮಲಾಪುರಕರ, ಡಾ. ನಿರ್ಮಿತಾ ಕುಮಾರ, ಡಾ. ನೇಹಾ ವಿ., ಇತರರು ಇದ್ದರು.