ಜಿಲ್ಲೆ

ಬದುಕನ್ನು ಬಂಗಾರವಾಗಿಸಿದ ಉಪಕಸುಬು

ಮಾದರಿಯಾದ ಪ್ರಗತಿಪರ ಕೃಷಿಕ ವೆಂಕಟೇಶ್​ಗೌಡ | ನಾಟಿ ಹಸುಗಳಿಂದ ಕೈ ತುಂಬಾ ಲಾಭ

ಟೇಕಲ್:  ಅನೇಕ ಸವಾಲಿನ ನಡುವೆಯೂ ಕೃಷಿ ಜತೆಗೆ ಉಪಕಸುಬು ಅಳವಡಿಸಿಕೊಂಡು, ಇರುವ ಭೂಮಿಯಲ್ಲೇ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಕ್ಷೇತ್ರನಹಳ್ಳಿಯ ಪ್ರಗತಿಪರ ರೈತ ವೆಂಕಟೇಶ್​ಗೌಡ

ಸಾಧಿಸಿ ತೋರಿಸಿದ್ದಾರೆ.

ಕಾಲಕಾಲಕ್ಕೆ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಮೂಲಕ ಪ್ರಗತಿ ಹೊಂದುತ್ತಿದ್ದರೂ ಪ್ರಕೃತಿ ವಿಕೋಪಕ್ಕೆ ನಲುಗಿದ ಅದೆಷ್ಟೊ ರೈತರು ಕೊನೇ ಳಿಗೆಯಲ್ಲಿ ಕೈ ಚೆಲ್ಲಿ ಕೂರುವ ಹಲವು ಸಂದರ್ಭಗಳಿವೆ.

ಆದರೆ, ಇಂಥ ಅನೇಕ ಸವಾಲುಗಳನ್ನು ಮೆಟ್ಟಿನಿಂತ ರೈತ ವೆಂಕಟೇಶ್​ಗೌಡ ಕೃಷಿ ಯಶೋಗಾಥೆ

ಎಲ್ಲರಿಗೂ ಮಾದರಿಯಾಗಿದೆ.

20 ಎಕರೆಯಲ್ಲಿ ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಕ್ಯಾರೆಟ್​, ಭತ್ತ, ರಾಗಿ, ಹೂಕೋಸು, ವಿವಿಧ ಹೂವು ಬೆಳೆದಿದ್ದು, ಇದರ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಮೇಕೆ ಸಾಕಣೆಯಿಂದ

ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಕ ಕುಟುಂಬದ

ಹಿನ್ನೆಲೆ ಇದ್ದರೂ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದಾರೆ.

ವಿವಿಧ ತಳಿಗಳ 50ಕ್ಕೂ ಹೆಚ್ಚು ನಾಟಿ ಹಸುಗಳನ್ನು ಪೋಷಣೆ ಮಾಡುವ ಜತೆಗೆ 12 ಲಕ್ಷ ರೂ. ಕೊಟ್ಟು ಆಂಧ್ರಪ್ರದೇಶದ ಪುಂಗನೂರು ನಾಟಿ ಹಸು ಖರೀದಿಸಿದ್ದಾರೆ. ಈ ಹಸುವಿನ ಹಾಲಿಗೆ ಬೇಡಿಕೆ ಇದ್ದು, ಕೈ ತುಂಬಾ ಲಾಭ ಬರುತ್ತಿದೆ.

ಪತಿ ಕೃಷಿ ಚಟುವಟಿಕೆಯಲ್ಲಿ ಬೆಂಬಲವಾಗಿರುವ ಪತ್ನಿ ಗೀತಮ್ಮ ವೆಂಕಟೇಶಗೌಡ ಜಿಲ್ಲಾ

ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿ ಆದಾಯದಲ್ಲಿ ಮಾಲೂರು ತಾಲೂಕಿನ

ಬಡ ಪ್ರತಿಭಾವಂತ ಮಕ್ಕಳ ಓದಿಗೆ ನೆರವು

ನೀಡಿ ದಂಪತಿ ಮಾದರಿಯಾಗಿದ್ದಾರೆ.

| ವೆಂಕಟೇಶ್​ಗೌಡ,ಪ್ರಗತಿಪರ ರೈತ ಕ್ಷೇತ್ರನಹಳ್ಳಿಮೊದಲಿನಿಂದಲೂ ಕೃಷಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದೇವೆ. ವ್ಯಾಸಂಗದ ದಿನಗಳಲ್ಲಿ ಡಾ.ಬಿ.ಆರ್​.ಅಂಬೇಡ್ಕರ ಚಿಂತನೆಯಿಂದ ಪ್ರೇರಣೆಗೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಬೆಳೆ ಮತ್ತು ಉಪಕಸುಬುಗಳಿಂದ ಬಂದ ಹಣದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿರುವೆ.