ತುಮಕೂರು: ತುಮಕೂರು ನಗರದ ಬಟವಾಡಿಯಿಂದ-ಗುಬ್ಬಿ ಗೇಟ್ ವರೆಗಿನ ಬಿ.ಎಚ್.ರಸ್ತೆಗೆ ಸಿದ್ಧಗಂಗಾ ಕ್ಷೇತ್ರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ಇಡಲಾಗಿದೆ.
ನಾಳೆ(ಏ.1) ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತ್ಯುತ್ಸವ ನಡೆಯಲಿದ್ದು, ಮುನ್ನಾದಿನವಾದ ಗುರುವಾರ ಬೆಳಗ್ಗೆ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-206ಗೆ, ಬಟವಾಡಿ ಎಪಿಎಂಸಿ-ಗುಬ್ಬಿ ಗೇಟ್ವರೆಗೂ ಶ್ರೀಗಳ ಹೆಸರನ್ನು ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಾಮಕರಣ ಮಾಡಲಾಗಿದೆ.
ಬಟವಾಡಿ ವೃತ್ತದಲ್ಲಿ ನಾಮಫಲಕ ಉದ್ಘಾಟನೆಯನ್ನು ಸಿದ್ಧಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ನೆರವೇರಿಸಿದರು. ತುಮಕೂರು ಸಂಸದ ಜಿ.ಎಸ್. ಬಸವರಾಜು, ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಕಮಿಷನರ್ ರೇಣುಕಾ, ಮೇಯರ್ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.