ಜಿಲ್ಲೆ

ಚಿಪ್ಪುಹಂದಿಯ ಚಿಪ್ಪುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

arunakunigal

ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಚಿಪ್ಪುಹಂದಿಯ ಚಿಪ್ಪುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಂಧಿತರಿಂದ 8 ಕೆಜಿ 200 ಗ್ರಾಂ ತೂಕದಷ್ಟು ಚಿಪ್ಪುಹಂದಿಯ ಚಿಪ್ಪುಗಳನ್ನ ಜಪ್ತಿ ಮಾಡಲಾಗಿದೆ.

ಮರಿಸ್ವಾಮಿ ಮತ್ತು ಇಬ್ರಾಹಿಂ ಬಂಧಿತರು. ಇವರಿಬ್ಬರೂ ಬಳ್ಳಾರಿಯಲ್ಲಿ ಚಿಪ್ಪುಹಂದಿಯನ್ನ ಬೇಟೆಯಾಡಿ, ಅದರ ಚಿಪ್ಪುಗಳನ್ನ ಸಂಗ್ರಹಿಸಿ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು.

ಚಿಪ್ಪುಹಂದಿಯ ಚಿಪ್ಪುಗಳ ಮಾರಾಟ ಮಾಡುತ್ತಿದ್ದ ಆರೋಪಿಗಳು

ಚೀನಾದಲ್ಲಿ ಚಿಪ್ಪುಹಂದಿಯ ಚಿಪ್ಪಿಗೆ ಬೇಡಿಕೆ ಹೆಚ್ಚಿದ್ದು, ಬೆಂಗಳೂರಿನಿಂದ ಅಂತಾರಾಷ್ಟ್ರೀಯ ಮಾರ್ಕೆಟ್‌ಗೆ ರವಾನಿಸಲು ಸ್ಕೆಚ್​ ಹಾಕಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಅಂದಾಜು 4 ಲಕ್ಷ ರೂಪಾಯಿ ಮೌಲ್ಯವಿದ್ದು, ಬೆಂಗಳೂರಿನಲ್ಲಿ 1 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನ ಬಂಧಿಸಿ, 8 ಕೆಜಿ 200 ಗ್ರಾಂ ತೂಕದಷ್ಟು ಚಿಪ್ಪುಗಳನ್ನು ಜಪ್ತಿ ಮಾಡಿದ್ದಾರೆ.