ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನ.19ರಂದು ನಡೆದ ರಾಷ್ಟ್ರಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ವ್ಯವಸ್ಥಿತವಾಗಿ ಹಾಗೂ ಸ್ಮರಣೀಯವಾಗಿ ನಡೆದಿದ್ದು, ಸರ್ವತ್ರ ಶ್ಲಾಘನೆಗೆ ತುತ್ತಾಗಿರುವುದು ಸಾರ್ಥಕ್ಯದ ಭಾವನೆ ಮೂಡಿಸಿದೆ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.
ಸೋಮವಾರ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ.ರಾಜಾರಾಮ ಕೆ.ಬಿ., ಪ್ರಾಂಶುಪಾಲ ರವಿರಾಜ್ ಎಸ್., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಡುಮಾರ ಕ್ರೀಡಾಕೂಟದ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು. ರವೀಂದ್ರ ದರ್ಬೆ, ವಿನ್ಸೆಂಟ್ ಫರ್ನಾಂಡಿಸ್, ಸುರೇಶ್ ಅತ್ರಮಜಲು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಾಲಿಂಗೇಶ್ವರ ಭಟ್, ಶಾಂಭವಿ ರೈ, ಜೆ.ಕೆ.ಪೂಜಾರಿ, ಯು.ಟಿ.ಮಹಮ್ಮದ್ ತೌಷಿಫ್, ವಿಕ್ರಂ ಶೆಟ್ಟಿ, ಇಸ್ಮಾಯಿಲ್ ಇಕ್ಬಾಲ್ ಭಾಗವಹಿಸಿದ್ದರು.
ವಿನ್ಸೆಂಟ್ ಫರ್ನಾಂಡಿಸ್ ಅವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಕಾಲೇಜಿಗೆ ಹಸ್ತಾಂತರಿಸಲಾಯಿತು. ಪ್ರಾಧ್ಯಾಪಕ ಪ್ರಮೋದ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.