ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ದೇಹದಲ್ಲಿನ ಅಂಗಾಂಗಳು ಯಾವ ರೀತಿ ಕಾರ್ಯ ನಿರ್ವಹಿಸಲಿವೆ, ಉಪಗ್ರಹ ಉಡಾವಣೆ ಸಮುದಲ್ಲಿ ವಿಜ್ಞಾನಿಗಳು ಪಡುವ ಶ್ರಮ, ಆಟವಾಡುತ್ತಲೇ ಗಣಿತ ವಿಷಯದಲ್ಲಿ ಪರಿರ್ಪೂಣತೆ ಹೊಂದುವುದು ಹೇಗೆ?… ಹೀಗೆ ಹಲವು ವೈಜ್ಞಾನಿಕ ವಿಷಯಗಳ ಬಗ್ಗೆ ನುರಿತ ತಜ್ಞರು ವಿವರಿಸುತ್ತಿದ್ದರೆ, ವಿದ್ಯಾಥಿರ್ಗಳು ಆಸಕ್ತಿಯಿಂದ ಆಲಿಸುತ್ತಿದ್ದರು. ಬಳಿಕ ಸ್ವತಃ ಮಾದರಿಗಳನ್ನು ಸಿದ್ಧಪಡಿಸಿ ಸುತ್ತಲಿದ್ದವರನ್ನು ನಿಬ್ಬೆರಗಾಗಿಸಿದ್ದಾರೆ.
ಇಂದು ಕಂಡು ಬಂದಿದ್ದು ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಸಿಡಾಕ್ ಆವರಣದಲ್ಲಿ ವಿಸ್ತಾರ್ ಜಿಂದಗಿ ಎಡುಟೈನ್ಮೆಂಟ್ ವತಿಯಿಂದ 10 ದಿನಗಳ ಕಾಲ ಆಯೋಜಿಸಿರುವ ಡಿಸ್ಕವರಿ-2024 ವಿಜ್ಞಾನ ಬೇಸಿಗೆ ತರಬೇತಿ ಶಿಬಿರದಲ್ಲಿ. ವಿಜ್ಞಾನಿ ಸಿ.ಎನ್.ಆರ್ ರಾವ್ ಮಾರ್ಗದರ್ಶನದಲ್ಲಿ ಮಹೇಶ ಮಾಶಾಳ ಹಾಗೂ ಡಾ. ಎಂ.ಎಸ್. ಶಿವಪ್ರಸಾದ ನೇತೃತ್ವದಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವಾಗಿ ವಿಜ್ಞಾನ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
14ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಆಯೋಜಿಸಿದ್ದ ಶಿಬಿರದಲ್ಲಿ ಕಾರವಾರ, ಬೆಳಗಾವಿ, ಬೆಂಗಳೂರು, ಆರವಾಡ, ರಾಯಚೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 120ಕ್ಕೂ ಹೆಚ್ಚು ವಿದ್ಯಾಥಿರ್ಗಳು ಪಾಲ್ಗೊಂಡಿದ್ದಾರೆ. 10 ದಿನಗಳ ಶಿಬಿರದಲ್ಲಿ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಬೌದ್ಧಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಿದ್ದಾರೆ.
ವಿಜ್ಞಾನದ ಸಂರ್ಪೂಣ ಮಾಹಿತಿ ಪಡೆದ ಮಕ್ಕಳು 10 ದಿನಗಳಲ್ಲೇ ಸುಮಾರು 600 ಮಾದರಿಗಳನ್ನು ಸಿದ್ಧಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿದ್ಯಾಥಿರ್ಗಳು ಸೋಲಾರ ಎನಜಿರ್, ಆದಿತ್ಯಾ&ಎಲ್1, ವಿಂಡ್ ಮಿಲ್, ದೂರದರ್ಶಕ ಸೇರಿ ಇನ್ನೂ ಅನೇಕ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಪ್ರಯೋಗಿಕ ಚಟುವಟಿಕೆಗಳು ಹಾಗೂ ಪ್ರಯೋಗ ನಡೆಸಲು ಬೇಕಾದ ಕೌಶಲಗಳ ಬಗ್ಗೆ ಮನವರಿಕೆ ಮಾಡಿಕೊಡುವುದರ ಜತೆಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಈ ಶಿಬಿರ ವೇದಿಕೆಯಾಯಿತು.
ಮಕ್ಕಳಿಗೆ ಸರಳವಾಗಿ ವಿಜ್ಞಾನ ತಿಳಿಸುವುದು ಶಿಬಿರದ ಉದ್ದೇಶ. ಮಕ್ಕಳು ಆಸಕ್ತಿಯಿಂದಲೇ ವಿಷಯಗಳ ಮಾಹಿತಿ ಪಡೆದು ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ವಿಜ್ಞಾನ ವಿಷಯ ಕಠಿಣವಲ್ಲ ಎಂಬ ಅರಿವು ಬರಲಿದೆ. ಶಿಬಿರದಲ್ಲಿ ವಿಜ್ಞಾನದ ಅರಿವಿನ ಜತೆಗೆ ಅವರ ಆರೋಗ್ಯದ ಬಗ್ಗೆಯೂ ತಿಳಿವಳಿಕೆ ನೀಡಲಾಯಿತು.*ಮಹೇಶ ಮಾಶಾಳ, ಆಯೋಜಕರು