ಜಿಲ್ಲೆ

ಕೊತ್ತಪೇಟ ಗ್ರಾಮದಲ್ಲಿ ನೈರ್ಮಲ್ಯ ಮರೀಚಿಕೆ

ರಾಯಲ್ಪಾಡು: ತಾಲೂಕಿನ ಲಕ್ಷ್ಮೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊತ್ತಪೇಟ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು,

ಸ್ವಚ್ಛ ಭಾರತ್​ ಯೋಜನೆಯು ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮದ ಚರಂಡಿಯನ್ನು ಎರಡ್ಮೂರು ವರ್ಷಗಳಿಂದ ಸ್ವಚ್ಛ ಮಾಡದಿದ್ದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊತ್ತಪೇಟ ಗ್ರಾಮದಲ್ಲಿ ಒಟ್ಟು 250 ಮನೆಗಳು ಇದ್ದು, ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಚರಂಡಿ ಸ್ವಚ್ಛತೆ, ರಸ್ತೆ, ಕುಡಿಯುವನೀರು ಸಮರ್ಪಕವಾಗಿಲ್ಲದೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಚೀಮಾರಿ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಎರಡು ಕಡೆ ಸಿಮೆಂಟ್​ ವಾಟರ್​ ಮಿನಿ ಟ್ಯಾಂಕ್​ ಇದ್ದು, ಅದರ ಸುತ್ತಮುತ್ತಲು ಸಹ ಗಿಡ&ಗುಂಟಿಗಳು ಬೆಳದು ನೀರು ಬರುವ ಸ್ಥಳವು ಅಶುದ್ಧವಾಗಿದೆ. ಶುದ್ಧವಾದ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಕದಲಿಯೇ ಸರ್ಕಾರಿ ಕನ್ನಡ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆದುರ್ವಾಸನೆಯಿಂದ ಮಕ್ಕಳವಿದ್ಯಾಭ್ಯಾಸಕ್ಕೂತೊಂದರೆಉಂಟಾಗುವ ಸಂಭವ ಏರ್ಪಟ್ಟಿದೆ. ಮಳೆ ಬಿದ್ದರೆ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರ ಸಂಬಂಧಸ್ವಚ್ಛತೆಗೊಳಿಸುವಂತೆ ಅಧಿಕಾರಿಗಳ ಸುತ್ತ ಸುತ್ತಿತ್ತಿದರು ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾಲೂಕಿನ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ವರ್ಷಕೊಮ್ಮೆಯಾದರೂ ಭೇಟಿ ನೀಡಿ ಸರ್ಕಾರದ ಯೋಜನೆಗಳು ಸದ್ಭಳಕೆಯಾಗುತ್ತಿದೆಯೇ ಇಲ್ಲವೇ ಎಂಬದನ್ನ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸ್ಥರಾದ ಕೆ.ಎನ್​.ನಾಗೇಂದ್ರಬಾಬು, ಕೆ.ವಿ.ರವೀಂದ್ರ, ಕೆ.ಎನ್​ ಚಂದ್ರಶೇಖರ, ಕೆ.ಆರ್​ನರಸಿಂಹಯ್ಯ, ಕೆ.ವಿ.ಆದಿರೆಡ್ಡಿ,ಸುಬ್ರಹ್ಮಣಿ, ಕೆ.ವಿ.ರಮೇಶ್​, ಗ್ರಾಪಂ ಸದಸ್ಯರಾದ ಈಶ್ವರಪ್ಪ, ಲಲಿತಮ್ಮ, ಕೆ.ಎನ್​. ಗಂಗರಾಜ್​ಕುಮಾರ್​, ಮುರಳಿ, ಸುರೇಶ್​, ರಾಮ್​ಕುಮಾರ್​, ನರಸಿಂಹ, ಜಿ.ರಾಮಕೃಷ್ಣ, ಭುವನೇಶ್ವರಿ, ನಾಗೇಂದ್ರ ಅವರು ಇನ್ನಾದರೂ ಗ್ರಾಮಾ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಸೊಳ್ಳೆಗಳ ವಾಸಸ್ಥಾನ

ಚರಂಡಿಯಲ್ಲಿನ ನೀರು ನಿಂತಿರುವುದರಿಂದಾಗಿ ಸೊಳ್ಳೆಗಳ ವಾಸಸ್ಥಾನವಾಗಿದ್ದು, ಇದರಿಂದ ಜ್ವರ, ನೆಗಡಿ, ಇತರೆ ಸಾಂಕ್ರಮಿಕ ರೋಗಗಳಿಂದ ಮಕ್ಕಳಿಂದ ಹಿಡಿದು ವೃದ್ಧರವೆಗೆಗೂ ಪ್ರತಿ ದಿನ ಆರೋಗ್ಯ ಕೇಂದ್ರಕ್ಕೆ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ. ಗ್ರಾಮಕ್ಕೆ ವಾರಕೊಮ್ಮೆಯಾದರೂ ಸ್ವಚ್ಛತಾ ವಾಹನ ಬರುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಸ್ವಚ್ಛತಾ ವಾಹನ ಬರುತ್ತಿದೆ. ಸ್ವಚ್ಛತಾ ವಾಹನ ಬರುತ್ತಿರುವ ಹಾಗೆ ಬಿಲ್ಲುಗಳನ್ನೂ ಗ್ರಾಮಪಂಚಾಯಿತಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಸ್ಮಶಾನಕ್ಕೆ ಹೋಗಿ ಬರಲು ರಸ್ತೆಯಿಲ್ಲದೆ ಖಾಸಗಿ ಜಮೀನಿನಲ್ಲಿ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಇನ್ನು ಖಾಸಗಿ ಜಮೀನಿನ ಮಾಲೀಕರೂ ಸ್ಮಶಾನಕ್ಕೆ ಹೋಗಲು ಅಡ್ಡಪಡಿಸುತ್ತಿದ್ದು, ಅನೇಕ ಬಾರಿ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ನೀಡಿದ್ದರೂ ಸಹ ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತ್ತಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ನಮಗೆ ಅನುಕೂಲ ಮಾಡಿಕೊಡಬೇಕು.

- ಕೆ.ವಿ.ರಮೇಶ್​, ಕೊತ್ತಪೇಟ ಗ್ರಾಮಸ್ಥ

ಕೊತ್ತಪೇಟ ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಲು ಕ್ರಿಯಾ ಯೋಜನೆ ಮೂಲಕ ಒಂದು ತಿಂಗಳಲ್ಲಿ ಸ್ವಚ್ಛತೆ ಮಾಡಲಾಗುವುದು.

- ರವಿಕುಮಾರ್​, ಪಿಡಿಒ 

ಗ್ರಾಮದಲ್ಲಿನ ಚರಂಡಿಗಳನ್ನು ಪಂಚಾಯಿತಿಯವರು ಕಳೆದ ಎರಡು ಮೂರು ವರ್ಷಗಳಿಂದಲೂ ಸ್ವಚ್ಚತೆ ಮಾಡದೆ, ಗ್ರಾಮದಲ್ಲಿನ ಮಕ್ಕಳು, ಹಿರಿಯರು ಸಾಂಕ್ರಮಿಕ ರೋಗಗಳಿಂದ ಬಳಲುತ್ತಿದ್ದಾರೆ. ತಕ್ಷಣವೇ ಗ್ರಾಮಪಂಚಾಯಿತಿಯಿಂದ ಗ್ರಾಮದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ, ಗ್ರಾಮದಲ್ಲಿನ ಮೂಲ ಸೌಲಭ್ಯಗಳನ್ನು ಸರಿಪಡಿಸಿ.

- ಭಾಗ್ಯಮ್ಮ, ಕೊತ್ತಪೇಟ ಗ್ರಾಮಸ್ಥೆ.