ಜಿಲ್ಲೆ

ಎ.ಎಸ್. ಪಾಟೀಲ ನಡಹಳ್ಳಿ ಪ್ರಶ್ನೆ; ರಾಜ್ಯದ ಮಂತ್ರಿಗಳು ಬದುಕಿದ್ದಾರೋ ಇಲ್ಲವೋ?

ಧಾರವಾಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಽಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಮಂತ್ರಿಗಳು ಬದುಕಿದ್ದಾರೋ ಇಲ್ಲವೋ ಎಂಬAತೆ ವರ್ತಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ಬರ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಬರ ಪರಿಸ್ಥಿತಿಯಲ್ಲಿ ರೈತರು ೨ ರೂಪಾ¬ಗೆ ಕೆಜಿಯಂತೆ ಮೇವು ಖರೀದಿಸಲು ಸರ್ಕಾರ ಆದೇಶಿಸಿದೆ. ಸರ್ಕಾರಕ್ಕೆ ಮÁನ ಮಯÁðದೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ಬೆಳೆ ನಷ್ಟವನ್ನು ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ಮÁಡಿಲ್ಲ. ಬೆಳೆವಿಮೆ ಕಟ್ಟಿದ ರೈತರಿಗೆ ತಾರತಮ್ಯ ಮÁಡಲಾಗಿದೆ ಎಂದರು.
ಬಿಜೆಪಿ ಅಽಕಾರದಲ್ಲಿದ್ದಾಗ ರಾಜ್ಯದ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮÁ್ಮನ್ ಯೋಜನೆಯ ೪,೦೦೦ ರೂಪಾಯಿ, ಡೀಸೆಲ್ ಸಬ್ಸಿಡಿಯನ್ನು ಕಾಂಗ್ರೆಸ್ ಬಂದ್ ಮÁಡಿದೆ. ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ಗಳು ರೈತ ವಿರೋಽಯÁಗಿವೆ. ಕಾಂಗ್ರೆಸ್ ಸರ್ಕಾರ ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥನೆ ಮÁಡಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದರು.
ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ಮಧ್ಯಂತರ ಪರಿಹಾರ ಎಂದು ಘೋಷಿಸಿದ ೨,೦೦೦ ರೂಪಾಯಿ ಬಹುತೇಕ ರೈತರಿಗೆ ತಲುಪಿಲ್ಲ. ಉಸ್ತುವಾರಿ ಸಚಿವ ಸಂತೋಷ ಲಾಡ್ ಭಾಷಣ ಬಿಟ್ಟು ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ಕೊಡಬೇಕು ಎಂದರು.
ಮಹದಾಯಿ ಹೋರಾಟ ಸಂದರ್ಭದಲ್ಲಿ ಲಾಠಿ ಏಟು ತಿಂದ ಅನೇಕ ರೈತರು ಇಂದಿಗೂ ಕೋರ್ಟ್ಗೆ ಅಲೆಯುತ್ತಿದ್ದಾರೆ. ಅವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದರು.
ಬಿಜೆಪಿ ಮುಖಂಡರಾದ ಸೀಮಾ ಮಸೂತಿ, ಬಸವರಾಜ ಕುಂದಗೋಳಮಠ, ಈಶ್ವರಗೌಡ ಪಾಟೀಲ, ಮೋಹನ ರಾಮದುರ್ಗ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.