ಗಂಗೊಳ್ಳಿ: ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಮಕ್ಕಿ ಮಹಾಲಿಂಗೇಶ್ವರ ಸರ್ಕಲ್‌ನಿಂದ ಬೆಳ್ಳಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಸ್ತೆ ಅಭಿವೃದ್ಧಿಪಡಿಸಲು ಹಿಂದಿನ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು 45 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಸರ್ಕಾರಕ್ಕೆ ಅನುದಾನ ವಾಪಸ್ ಹೋಗಿದ್ದರಿಂದ ರಸ್ತೆ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ 3 ಕಿ.ಮೀ. ಉದ್ದದ ರಸ್ತೆ ಈಗ ಸಂಪೂರ್ಣ ಹೊಂಡಮಯವಾಗಿದ್ದು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಿನಮಕ್ಕಿ ಕಡೆಯಿಂದ ಹಕ್ಲಾಡಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೇನಾಪುರ ರೈಲ್ವೆ ನಿಲ್ದಾಣ ತಲುಪಲು ಇದು ಪ್ರಮುಖ ಮಾರ್ಗವಾಗಿದೆ. ಇದಲ್ಲದೆ ಸೇನಾಪುರ, ಬೆಳ್ಳಾಡಿ, ನಾಡಗುಡ್ಡೆಯಂಗಡಿ ಹಾಗೂ ವಾಣಿಕೊಳಲು ದೇವಸ್ಥಾನಕ್ಕೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 25 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಈ ರಸ್ತೆ ಅಭಿವೃದ್ಧಿ ಮಾಡಿದ್ದು, ಬಳಿಕ ಈ ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಕಾರ‌್ಯವಾಗಿಲ್ಲ. ಮಳೆಗಾಲದಲ್ಲಿ ಇಲ್ಲಿನ ಹೊಂಡಗಳಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ತೀರಾ ಅಪಾಯಕಾರಿಯೂ ಆಗಿದೆ.
ಈ ರಸ್ತೆ ಅಭಿವೃದ್ಧಿಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಳೆದ 20 ವರ್ಷಗಳಿಂದ ನಿರಂತರ ಮನವಿ ಸಲ್ಲಿಸಲಾಗಿದೆ. ಗ್ರಾಮ ಸಡಕ್ ಅಥವಾ ಇತರೆ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಿ ಎಂಬ ಸ್ಥಳೀಯರ ಬೇಡಿಕೆಗೆ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಸಂಪೂರ್ಣವಾಗಿ ಹದಗೆಟ್ಟಿರುವ ಕಟ್ಟಿನಮಕ್ಕಿ ಮಹಾಲಿಂಗೇಶ್ವರ ಸರ್ಕಲ್‌ನಿಂದ ಅಂಬೇಡ್ಕರ್ ನಗರ, ಸೇನಾಪುರ, ಬೆಳ್ಳಾಡಿ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯನ್ನು ಆದಷ್ಟು ಶ್ರೀ ದುರಸ್ತಿ ವಾಡಬೇಕು. ಅಭಿವೃದ್ಧಿ ಭಾಗ್ಯವೇ ಕಾಣದ ಈ ರಸ್ತೆಯ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ರಾಘವೇಂದ್ರ ಆಚಾರ್, ಸ್ಥಳೀಯ https://www.vijayavani.net/doctors-are-reluctant-to-come-to-rural-areas https://www.vijayavani.net/the-institution-is-ready-to-equip-good-students