ಜಿಲ್ಲೆ

ಜಾಕೀರ್ ಹುಸೇನ್‌ಗೆ ಲಯ ಶ್ರದ್ಧಾಂಜಲಿ: ತಬಲಾದ ಲಯವನ್ನು ಸುಮಧುರಗೊಳಿಸಿದ ಮಾಂತ್ರಿಕ

ಬೆಂಗಳೂರು: ತಬಲಾ ವಾದನವು ಸಂಗೀತದ ಯಶಸ್ವಿ ಪ್ರದರ್ಶನಲ್ಲಿ ಪ್ರಮುಖವಾಗಿದ್ದು, ಅಂತಹ ತಬಲಾದ ಲಯವನ್ನು ಸುಮಧುಗೊಳಿಸಿದ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಎಂದು ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಬಣ್ಣಿಸಿದ್ದಾರೆ.

ಇತ್ತೀಚೆಗೆ ನಿಧರಾದ ಉಸ್ತಾದ್ ಜಾಕೀರ್ ಹುಸೇನ್‌ಗೆ ಸತೀಶ್ ಹಂಪಿಹೊಳಿ ಮ್ಯೂಸಿಕ್ ೌಂಡೇಶನ್ ಆಯೋಜಿಸಿದ್ದ ಲಯ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಬಲಾ ಮಾಂತ್ರಿಕ ಎಂದೇ ಪ್ರಸಿದ್ಧರಾಗಿದ್ದ ಜಾಕೀರ್ ಹುಸೇನ್ ಅವರಿಗೆ ತಬಲಾ ವಾದನವನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಹಿಂದೂಸ್ತಾನಿ ಗಾಯಕ ಪಂಡಿತ್ ಮೃತ್ಯುಂಜಯ ಶೆಟ್ಟರ್ ಮಾತನಾಡಿ ಜಾಕೀರ್ ಹುಸೇನ್ ಅವರ ಸಾಧನೆ ಅಸಮಾನ್ಯವಾದುದು. ದೈವೀಕೃಪೆ ಇರುವ ವ್ಯಕ್ತಿಗಳಿಂದ ಮಾತ್ರ ಇಂಹ ಸಾಧನೆ ಮಾಡಲು ಸಾಧ್ಯ. ಹುಸೇನ್ ದೈವತ್ವದ ಸಾಧಕ ಎಂದು ವಿಶ್ಲೇಷಿಸಿದರು.

ಸಮಾರಂಭದಲ್ಲಿ ಬಿಜೆಪಿ ನಾಯಕಿ ರೇಖಾ ಗೋವಿಂದ್, ಪಂಡಿತ್ ಸತೀಶ್ ಹಂಪಿಹೊಳಿ ಮತ್ತಿತರರು ಉಪಸ್ಥಿತರಿದ್ದರು. ಹಂಪಿಹೊಳಿ ಮ್ಯೂಸಿಕ್ ೌಂಡೇಶನ್ ವಿದ್ಯಾರ್ಥಿಗಳು ಲಯ ಗೌರವ ಸಲ್ಲಿಸಿದರು. ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾವೇದಿಕೆ ವಿದ್ಯಾರ್ಥಿಗಳು ಗಾಯನ ನಡೆಸಿಕೊಟ್ಟರು.