ಚಿಕ್ಕಮಗಳೂರು: ಏಳು ದಶಕಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿರುವ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿಗೆ ಕಾಯಕಲ್ಪ ನೀಡುವಂತೆ ಕಾಲೇಜಿನ ಬೋಧಕ ಸಿಬ್ಬಂದಿ ಶಾಸಕರಾದ ಎಚ್.ಡಿ.ತಮ್ಮಯ್ಯ ಮತ್ತು ಎಸ್.ಎಲ್.ಭೋಜೇಗೌಡ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭದ ವೇಳೆ ಕಾಲೇಜು ಪ್ರಾಚಾರ್ಯೆ ಕೆ.ಸಿ.ಚಾಂದಿನಿ ಮvತ್ತು ಅರ್ಥಶಾಸ್ತç ವಿಭಾಗದ ಸಂಯೋಜಕ ಪ್ರೊ.ಕೆ.ಎನ್.ಲಕ್ಷಿö್ಮÃಕಾಂತ್ ಅವರು ಶಾಸಕರಿಗೆ ಮನವಿ ಸಲ್ಲಿಸಿದರು.
ನಗರದಲ್ಲೇ ಅತ್ಯಂತ ದೊಡ್ಡ ಕಾಲೇಜಾಗಿರುವ ಐಡಿಎಸ್‌ಜಿ ಸರ್ಕಾರಿ ಕಾಲೇಜು ಕಳೆದ ೭ ದಶಕಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಪ್ರತಿ ವರ್ಷ ೩ ರಿಂದ ೪ ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಸಂಸ್ಥೆ ಹಲವು ಕುಂದು ಕೊರತೆಗಳನ್ನು ಎದುರಿಸುತ್ತಿದ್ದು, ಅವುಗಳ ನಿವಾರಣೆಗೆ ಸಹಕರಿಸುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಸ್ಥೆಯ ಆವರಣದಲ್ಲಿ ಅಮೃತ್ ಯೋಜನೆಯಡಿ ಈಗಾಗಲೇ ನಿರ್ಮಾಣ ಮಾಡಿರುವ ನೀರಿನ ಟ್ಯಾಂಕನ್ನು ಉದ್ಘಾಟಿಸಬೇಕು. ಉದ್ಯಾನವನವನ್ನು ನವೀಕರಣ ಮಾಡಬೇಕು. ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆಯಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚ್‌ಗಳನ್ನು ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾಲೇಜಿನ ಮುಂಭಾಗ, ಹಿಂಭಾಗ ಮತ್ತು ಆವರಣದಲ್ಲಿ ಹೈ ಮಾಸ್ಕ್ ದೀಪಗಳನ್ನು ಅಳವಡಿಸಬೇಕು. ಕಾಲೇಜಿನ ಕಾಂಪೌAಡನ್ನು ಎತ್ತರಿಸಿ, ಮುಳ್ಳು ತಂತಿ ಅಳವಡಿಸಬೇಕು, ಅತ್ಯಂತ ಹಳೆಯದಾಗಿರುವ ಸಂಸ್ಥೆಯ ಕಟ್ಟಡವನ್ನು ನವೀಕರಿಸಬೇಕು ಎಂದು ತಿಳಿಸಿದರು.
ಕಾಲೇಜು ಮತ್ತು ಆವರಣದಲ್ಲಿ ಹೈ ರೆಸುಲೇಶನ್ ಹೊಂದಿರುವ ಸಿ ಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಕ್ಯಾಂಟೀನ್, ಜೆರಾಕ್ಸ್ ಮತ್ತು ಬ್ಯಾಂಕಿಗೆ ಕಟ್ಟಡ ನಿರ್ಮಾಣ ಮಾಡಬೇಕು. ಒಳಾಂಗಣ ಕ್ರೀಡಾಂಗಣ, ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಶ್ ರೂಂ, ಫೈಬರ್ ಶೀಟ್‌ನೊಂದಿಗೆ ಸಭಾಂಗಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಕಾಲೇಜಿನ ಅಭಿವೃದ್ಧಿಗೆ ಈಗಾಗಲೇ ಎರಡು ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.