ಜಿಲ್ಲೆ

ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಮನವಿ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡಗು ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.


ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ ಮತ್ತು ನಿವೃತ್ತಿ ವೇತನ ವಿಧೇಯಕ ೨೦೧೪ ರದ್ದುಪಡಿಸಬೇಕು. ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಹೆಳೆಯ ಪಿಂಚಣಿಯನ್ನು ಜಾರಿಗೆ ತರಬೇಕು. ೧-೪-೨೦೦೪ರ ಪೂರ್ವದಲ್ಲಿ ನೇಮಕಾತಿಯಾದವರಿಗೆ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು. ಅನುದಾನಿತ ನೌಕರಿಗೂ ಕೂಡ ಸರ್ಕಾರಿ ನೌಕರಿಗೆ ನೀಡುವಂತಹ ವೈದ್ಯಕೀಯ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಶಿಕ್ಷಕರು ಪತ್ರದಲ್ಲಿ ಮನವಿ ಮಾಡಿದರು.


ಇತ್ತೀಚಿಗೆ ೨೦೨೦ರ ಡಿ.೩೦ ವರೆಗಿನ ಪ್ರೌಢಶಾಲೆ, ಪದವಿ ಪೂರ್ವ ಶಾಲೆಯಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ್ದನ್ನು ಶಿಕ್ಷಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.


ಪಿಂಚುಣೆ ವಂಚಿತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಪೂಜಾರ್, ಉಪನ್ಯಸಕರಾದ ಸಿದ್ದಾರಾಜು, ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಕುಮಾರ್, ಪಿಂಚಣೆ ವಂಚಿತ ನೌಕರರ ಸಂಘದ ಸಂಚಾಲಕರಾದ ಜಯಕುಮಾರ್, ಶಿವಪ್ರಸಾದ್, ತಿಪ್ಪೇ ಸ್ವಾಮಿ, ಅಶೋಕ್, ಸಿದ್ದಾರೂಢ ತಳವಾರ್, ರಂಗನಾಥ್, ಲೋಕೇಶ್, ತಿಮ್ಮರಾಜು, ರಾಘವೇಂದ್ರ, ಗುಂಡಪ್ಪ, ಅಕ್ಕಮ್ಮ ಮುಂತಾದವರು ಹಾಜರಿದ್ದರು.