ಗುಳೇದಗುಡ್ಡದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದಿಂದ ಉಪತಹಸೀಲ್ದಾರ್ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಶ್ಯಾಮಸುಂದರ ಭಜಂತ್ರಿ, ಹುಲ್ಲಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗುರು ಭಜಂತ್ರಿ, ಶಂಕರ ಭಜಂತ್ರಿ ಇತರರಿದ್ದರು. 
ಜಿಲ್ಲೆ

ವಿಜೃಂಭಣೆಯಿಂದ ಜಯಂತಿ ಆಚರಿಸಲು ಮನವಿ

ಗುಳೇದಗುಡ್ಡ, ನುಲಿ ಚಂದಯ್ಯನವರ, ಅಖಿಲ ಕರ್ನಾಟಕ ಕುಳವ ಮಹಾಸಂಘ,
ಗುಳೇದಗುಡ್ಡ: ತಾಲೂಕಿನಾದ್ಯಂತ ನುಲಿ ಚಂದಯ್ಯನವರ ಜಯಂತ್ಯುತ್ಸವನ್ನು ವಿಜೃಂಭಣೆಯಿಂದ ಆಚರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕುಳವ ಮಹಾಸಂಘದಿಂದ ಉಪತಹಸೀಲ್ದಾರ್ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಸಂಘ- ಸಂಸ್ಥೆಗಳ ಮುಖಂಡರು, ಕೊರಮ, ಕೊರಚ, ಕುಳುವ ಸಮಾಜದವರನ್ನು ಕರೆದು ಪೂರ್ವಭಾವಿ ಸಭೆ ನಡೆಸಿ ಸಲಹೆ ಸೂಚನೆ ಪಡೆದು ಅದ್ದೂರಿಯಾಗಿ ಆಚರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಸರ್ಕಾರ ರಜಾರಹಿತ ಜಯಂತಿ ಆಚರಿಸುವಂತೆ ಆದೇಶ ನೀಡಿದ್ದು, ತಾಲೂಕಿನಾದ್ಯಂತದ ಶಾಲೆ-ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಚರಿಸುವಂತೆ ನಿರ್ದೇಶನ ನೀಡಬೇಕೆಂದೂ ತಿಳಿಸಿದ್ದಾರೆ.

ಸಂಘದ ತಾಲೂಕು ಅಧ್ಯಕ್ಷ ಶ್ಯಾಮಸುಂದರ ಭಜಂತ್ರಿ, ಹುಲ್ಲಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಗುರು ಭಜಂತ್ರಿ, ಶಂಕರ ಭಜಂತ್ರಿ, ಯಮನೂರ ಭಜಂತ್ರಿ, ಶ್ರೀಕಾಂತ ಭಜಂತ್ರಿ, ರುದ್ರಪ್ಪ ಭಜಂತ್ರಿ, ವೀರಭದ್ರ ಭಜಂತ್ರಿ, ರಮೇಶ ಭಜಂತ್ರಿ, ಮುತ್ತಪ್ಪ ಚಿಮ್ಮಲಗಿ, ಪರಶುರಾಮ ಭಜಂತ್ರಿ ಮತ್ತಿತರರಿದ್ದರು.