ಜಿಲ್ಲೆ

ಮೊಳಕಾಲ್ಮೂರಲ್ಲಿ ಸ್ವಚ್ಛತೆ ಕೈಗೊಳ್ಳಲು ಮನವಿ

Davangere - Desk - Mahesh Babu E

ಮೊಳಕಾಲ್ಮೂರು: ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಆಗಿರುವ ದುರಂತ ಮೊಳಕಾಲ್ಮೂರಲ್ಲಿಯೂ ಆಗುವ ಸಾಧ್ಯತೆ ಹೆಚ್ಚು ಇದೆ. ಕಾರಣ ಪಟ್ಟಣ, ಹಳ್ಳಿಗಳಲ್ಲಿ ಜಲ ಸಂಗ್ರಾಹಾಗಾರಗಳ ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ ಎಂದು ರೈತಸಂಘ ಆರೋಪಿಸಿದೆ.

ತಹಸೀಲ್ದಾರ್ ರೂಪಾ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಮುಖಂಡರು, ಚರಂಡಿ, ಟ್ಯಾಂಕ್‌ಗಳ ಸ್ವಚ್ಛತೆ ಗಗನ ಕುಸಮವಾಗಿದೆ. ಆದರೆ, ಸ್ವಚ್ಛತೆಗೆ ಹಣ ವೆಚ್ಚ ಮಾಡಿರುವ ಲೆಕ್ಕ ಪಾತ್ರ ಕೊಡಲಾಗುತ್ತಿದೆ. ಈಗಲಾದರೂ ಕವಾಡಿಗರಹಟ್ಟಿಯಲ್ಲಿ ದುರಂತದಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕೂಡಲೇ ಶುದ್ಧ ನೀರು ಪೂರೈಕೆ, ಹಳ್ಳಿ-ಪಟ್ಟಣದಲ್ಲಿ ಸ್ವಚ್ಛ ಪರಿಸರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ರವಿಕುಮಾರ್, ರಾಜ್ಯ ಉಪಾದ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ಪದಾಧಿಕಾರಿಗಳಾದ ಕನಕ ಶಿವಮೂರ್ತಿ, ಪಾಪಯ್ಯ, ನಿಂಗಣ್ಣ, ಎಚ್.ಟಿ.ಚಂದ್ರಣ್ಣ, ರಾಜಣ್ಣ, ಈರೇಶ್, ಮಂಜುನಾಥ, ವೀರಣ್ಣ ಇತರರಿದ್ದರು.