ಜಿಲ್ಲೆ

ಪ್ರಗತಿ ವಿದ್ಯಾಸಂಸ್ಥೆಗೆ ದಾಖಲೆಯ ಪ್ರಶಸ್ತಿ

ಪ್ರಸಿನ್ ಕೆ.ಆರ್

ಸರಗೂರು: ಪಟ್ಟಣದ ಲಯನ್ಸ್ ಶಾಲೆಯಲ್ಲಿ ಗುರುವಾರ ನಡೆದ ಸರಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆಯೂ ಒಟ್ಟು 35 ಪ್ರಶಸ್ತಿಗಳನ್ನು ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗಳಿಸಿದ ದಾಖಲೆ ಪ್ರಗತಿ ವಿದ್ಯಾಸಂಸ್ಥೆಯದ್ದಾಗಿದೆ. ಒಂದರಿಂದ ನಾಲ್ಕನೇ ತರಗತಿವರೆಗಿನ ವೈಯಕ್ತಿಕ ವಿಭಾಗದ 13 ಸ್ಪರ್ಧೆಗಳಲ್ಲಿ 10 ಪ್ರಥಮ, 3 ದ್ವಿತೀಯ ಹಾಗೂ ಸಾಮೂಹಿಕ ವಿಭಾಗದ ನಾಲ್ಕು ಪ್ರಥಮ ಸ್ಥಾನ ಮತ್ತು ಐದರಿಂದ ಏಳನೇ ತರಗತಿವರೆಗಿನ ವೈಯಕ್ತಿಕ ವಿಭಾಗದ 13 ಸ್ಪರ್ಧೆಗಳಲ್ಲಿ 10 ಪ್ರಥಮ, ಒಂದು ದ್ವಿತೀಯ ಹಾಗೂ ಸಾಮೂಹಿಕ ವಿಭಾಗದ ನಾಲ್ಕರಲ್ಲಿ ಎರಡು ಪ್ರಥಮ ಸ್ಥಾನ ಗಳಿಸಿ ಸಮಗ್ರ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಬಹುಮಾನ ಪಡೆಯಲು ಕಾರಣಕರ್ತರಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಡಳಿತಾಧಿಕಾರಿ ಗುರುದತ್ ಹಾಗೂ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.