ಜಿಲ್ಲೆ

ಮಳೆಯಿಂದ ತುಂಬಿದ ಹಳ್ಳ, ಕೊಚ್ಚಿ ಹೋದ ಸೇತುವ

Raichur - Reporter - Rachhai Swamy

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಚಿರತನಾಳ-ಬೊಮ್ಮನಾಳ ಮಧ್ಯದ ಸೇತುವೆ ಹಳ್ಳಕ್ಕೆ ನೀರು ಹರಿದು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಕಿತ್ತು ಹೋಗಿದೆ.

ಸಂಪರ್ಕ ಕಲ್ಪಿಸಲು ಇರುವ ಏಕೈಕ ಸೇತುವೆ ಇದಾಗಿದ್ದು ಹೊಸ ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗ ಸೇತುವೆ ಕೊಚ್ಚಿ ಹೋಗಿರುವುದರಿಂದ ಸಂಪರ್ಕ ಪಡೆಯಲು ಸಮಸ್ಯೆಯಾಗಿದೆ. ಸಂಚಾರ ಸ್ಥಗಿತವಾಗಿದೆ.