ಬೀಳಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಜಯಂತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ತಹಸೀಲ್ದಾರ್ ವಿನೋದ ಹತ್ತಳ್ಳಿ, ಸಿಪಿಐ ಎಚ್.ಬಿ. ಸಣ್ಣಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ ಇತರರಿದ್ದರು. 
ಜಿಲ್ಲೆ

ದೇಶ ಕಂಡ ಅಪರೂಪರದ ವ್ಯಕ್ತಿತ್ವ

ಬೀಳಗಿ: ದೇಶ ಕಂಡ ಅಪರೂಪರದ ವ್ಯಕ್ತಿತ್ವವುಳ್ಳ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ 118ನೇ ಜಯಂತಿಗೆ ಚಾಲನೆ ಆವರು ಮಾತನಾಡಿದರು.

ಬೆಳಗಾವಿ ವಿಭಾಗದ ಡಿ.ಎಸ್.ಎಸ್. ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಬದಲಾವಣೆ ಕಾಣಬೇಕಾಗಿದೆ. ಎಡಗೈ ಮತ್ತು ಬಲಗೈ ಎನ್ನುವ ಭಾವನೆ ನಮ್ಮಿಂದ ಹೊಗಬೇಕಾಗಿದೆ. ಎಲ್ಲರೂ ನಮ್ಮವರು ಎನ್ನುವ ಭಾವನೆ ಬರಬೇಕಾಗಿದೆ. ಒಳ ಮೀಸಲಾತಿ ಜಾರಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ಸಿಪಿಐ ಎಚ್.ಬಿ. ಸಣ್ಣಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಪಪಂ ಅಧ್ಯಕ್ಷ ಯಲಗುರದಪ್ಪ (ಮುತ್ತು) ಬೋರ್ಜಿ, ಬಿಇಒ ಆರ್.ಎಸ್.ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ಇದ್ದರು.