ಮೈಸೂರು: ಬಸ್ನಲ್ಲಿ ಮಹಿಳೆಯರನ್ನು ಚುಡಾಯಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಕುರಿತು ಹಗುರವಾಗಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಸ್ನಿಂದ ಹೊರದಬ್ಬಿ ಗೂಸಾ ನೀಡಿದ ಘಟನೆ ಮೈಸೂರು ನಗರದ ಪಿ.ಕೆ.ಸ್ಯಾನಿಟೋರಿಯಂನಲ್ಲಿ ಗುರುವಾರ ನಡೆದಿದೆ.
ನಗರ ಬಸ್ ನಿಲ್ದಾಣದಿಂದ ಮೇಟಗಳ್ಳಿ ಕಡೆಗೆ ತೆರಳುವ ಮಾರ್ಗದ ಬಸ್ನಲ್ಲಿ ಮಹಿಳೆಯರನ್ನು ವ್ಯಕ್ತಿಯೊಬ್ಬ ಚುಡಾಯಿಸುತ್ತಿದ್ದ. ಇದನ್ನು ಮಹಿಳಾ ಪ್ರಯಾಣಿಕರು ಪ್ರಶ್ನೆಸಿದಾಗ ಕೊಲೆ ಬೆದರಿಕೆ ಹಾಕಿದ್ದಾನೆ. ತಾಳ್ಮೆ ಕಳೆದುಕೊಂಡ ಮಹಿಳೆಯರು ಆ ವ್ಯಕ್ತಿಯನ್ನು ಬಸ್ನಿಂದ ಹೊರದಬ್ಬಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿ ವಿವಿ ಮೊಹಲ್ಲಾ ಮೂಲದವ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.