ಮೈಸೂರು: 'ನಾನು ಬಡವ, ನನ್ನ ಕತ್ತು ಸೀಳ ಬೇಡಿ' ಎಂದು ಮೈಸೂರು ಜಿಲ್ಲೆ ನಂಜನಗೂಡು ಮತ್ತು ಟೀ.ನರಸೀಪುರ ತಾಲೂಕುಗಳಲ್ಲಿ ಬೀದಿಬದಿ ವ್ಯಾಪಾರಸ್ಥರ ವಿಭಿನ್ನ ರೀತಿಯ ಅಭಿಯಾನ ಶುರು ಮಾಡಿದ್ದಾರೆ.
ಉದಯಪುರದಲ್ಲಿ ಟೈಲರ್ ಕನ್ಹಯ್ಯರ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲೂ ಹಿಂದುಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿವೆ. ಮೈಸೂರು ಜಿಲ್ಲೆಯಲ್ಲೂ ಟೈಲರ್ ಕನ್ಹಯ್ಯ ಹತ್ಯೆ ಖಂಡಿಸಿ ವಿಭಿನ್ನ ರೀತಿಯಲ್ಲಿ ಅಭಿಯಾನ ಆರಂಭಿಸಲಾಗಿದೆ.
ಹಿಂದು ಕಾರ್ಯಕರ್ತರು ಮತ್ತು ಹಿಂದು ವ್ಯಾಪಾರಸ್ಥರು 'ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ. ನಾನು ಬಡವ, ನನ್ನ ಕತ್ತು ಸೀಳಬೇಡಿ' ಎಂಬ ಬರಹವುಳ್ಳ ಪೋಸ್ಟರ್ ಹಿಡಿದು ಅಭಿಯಾನ ನಡೆಸುತ್ತಿದ್ದಾರೆ.