ಜಿಲ್ಲೆ

ಕೆರೆ ಕೋಡಿ ನೀರಲ್ಲಿ ಹರಿದು ಬಂತು ರಾಶಿರಾಶಿ ಮೀನು! ಗ್ರಾಮಸ್ಥರಿಗೆ ಭರ್ಜರಿ ಮೀನೂಟ

arunakunigal

ದಾವಣಗೆರೆ: ತಾಲೂಕಿನಾದ್ಯಂತ ಶನಿವಾರ ರಾತ್ರಿ‌ಯಿಡೀ ವರ್ಷ‌ಧಾರೆಯಾಗಿದ್ದು, ಮಾಳಗೊಂಡನಹಳ್ಳಿ ಕೆರೆ ಕೋಡಿಯಾಗಿ ಅಕ್ಕಪಕ್ಕದ ಹೊಲಗದ್ದೆಗಳು ಜಲಾವೃತಗೊಂಡಿದೆ.

ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಭಾನುವಾರ ಬೆಳ್ಳಂಬೆಳಗ್ಗೆ ಹರಿದು ಬಂದ ಜನಸಾಗರ, ಕೋಡಿ ನೀರಲ್ಲಿ ಮೀನು‌ ಹಿಡಿಯಲು‌ ಮುಗಿಬಿದ್ದಿದ್ದರು. ಗ್ರಾಮಸ್ಥರಲ್ಲಿ ಕೆರೆ ಕೋಡಿ ಬಿದ್ದ ಸಂಭ್ರಮ ಒಂದೆಡೆಯಾದರೆ, ಕೃಷಿ ಭೂಮಿ ತುಂಬೆಲ್ಲ ಮಿನಿಕೆರೆಯಂತಾಗಿರುವುದು ಮತ್ತೊಂದೆಡೆ ಆತಂಕ ತಂದೊಡ್ಡಿದೆ.