ಜಿಲ್ಲೆ

ಬಿರುಗಾಳಿ ಮಳೆ: ನೆಲಕ್ಕುರುಳಿದ 90ಕ್ಕೂ ಹೆಚ್ಚು ತೆಂಗಿನ ಮರ, ರೈತ ಮಹಿಳೆಯ ಗೋಳಾಟ ನೋಡಲ್ತಾಗಿಲ್ಲ

arunakunigal

ಮಂಡ್ಯ: ಕೆ.ಆರ್‌.ಪೇಟೆ ತಾಲೂಕಿನ ಅಂಚನಹಳ್ಳಿಯಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ 90ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಈ ತೋಟ ರೈತ ಮಹಿಳೆ ವೀರಾಜಮ್ಮ ಅವರಿಗೆ ಸೇರಿದ್ದು, ಇವರ ಜೀವನೋಪಾಯಕ್ಕೆ ತೆಂಗಿನ ಮರಗಳೇ ಆಧಾರವಾಗಿತ್ತು. ಫಲ ನೀಡುತ್ತಿದ್ದ ತೆಂಗಿನ ಮರಗಳನ್ನು ಕಳೆದುಕೊಂಡ ವೀರಾಜಮ್ಮರ ಆಕ್ರಂದನ ಮುಗಿಲು ಮುಟ್ಟಿದೆ. ಫಲ ನೀಡುತ್ತಿದ್ದ ಮರಗಳು ಒಂದೇ ರಾತ್ರಿಯಲ್ಲಿ ಮಣ್ಣುಪಾಲಾಗಿವೆ. ನಾನು ಹೇಗೆ ಜೀವನ ನಡೆಸಲಿ? ಕಷ್ಟಪಟ್ಟು ಬೆಳೆಸಿದ್ದ ಮರಗಳು ಮಳೆಗೆ ನಾಶವಾಗಿವೆ. ನಾನೇನು ಮಾಡಲಿ? ದೇವರೇ ನಿನಗೆ ಕರುಣೆ ಇಲ್ಲವಾ? ಅಯ್ಯೋ ಮಳೆಯೇ, ನನ್ನ ಒಡಲಿಗೆ ಬೆಂಕಿ ಇಟ್ಟುಬಿಟ್ಟೆಯಲ್ಲಾ? ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.