ಹಲಗೂರು ಪೊಲೀಸ್ ಠಾಣಾ ಸಿಬ್ಬಂದಿ ಏಕತೆ ಓಟದಲ್ಲಿ ಭಾಗವಹಿಸಿದ್ದರು.  
ಜಿಲ್ಲೆ

ದೇಶದ ಏಕತೆ ಪ್ರತಿನಿಧಿಸುವ ಓಟ

ಹಲಗೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆಶಯದಂತೆ ದೇಶದಲ್ಲಿ ಎಲ್ಲ ಧರ್ಮದ ಜನರು ಏಕತೆಯಿಂದ ಮುನ್ನಡೆಯಬೇಕೆಂದು ದೇಶದಾದ್ಯಂತ ಏಕತೆಯ ಓಟ ಹಮ್ಮಿಕೊಳ್ಳಲಾಗಿದೆ ಎಂದು ಹಲಗೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ತಿಳಿಸಿದರು.

ಹಲಗೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಳಗ್ಗೆ ಹಮ್ಮಿಕೊಂಡಿದ್ದ ಏಕತೆಯ ಓಟದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತವು ವಿವಿಧತೆಯಿಂದ ಕೂಡಿದ ದೇಶ. ಸ್ವಾತಂತ್ರ್ಯ ನಂತರ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತವನ್ನು ಏಕೀಕರಣಗೊಳಿಸಬೇಕೆಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಮ್ಮ ದೇಶದಲ್ಲಿ ಹಲವಾರು ಭಾಷೆ, ಹಲವಾರು ಧರ್ಮದ ಜನರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ಏಕೀಕರಣಗೊಂಡು ದೇಶವನ್ನು ಮುನ್ನಡೆಸಬೇಕಿದೆ. ಅದಕ್ಕಾಗಿ ಈ ದಿನ ದೇಶಾದ್ಯಂತ ಏಕತೆಯ ಓಟವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಓಟದಲ್ಲಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ಏಕತಾ ಓಟವು ಹಲಗೂರು ವೃತ್ತ , ಬೈಪಾಸ್ ರಸ್ತೆ ಮೂಲಕ ಎಚ್.ಬಸಾಪುರ, ಚಿಲ್ಲಾಪುರದವರೆಗೆ ಹೊರಟು ಮತ್ತೆ ಹಲಗೂರು ಮಾರ್ಗವಾಗಿ ಪೊಲೀಸ್ ಠಾಣೆಗೆ ಹಿಂದಿರುಗಿತು.