ಹನೂರು : ತಾಲೂಕಿನ ತಾಳುಬೆಟ್ಟ-ಮಲೆಮಹದೇಶ್ವರ ಬೆಟ್ಟ ಮಾರ್ಗಮಧ್ಯೆ ಗುರುವಾರ ಸಂಜೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಭಕ್ತರಲ್ಲಿ ಆತಂಕ ಉಂಟು ಮಾಡಿತ್ತು. ಸಂಜೆ 6.30ರ ವೇಳೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ರಸ್ತೆಯನ್ನು ಬಿಟ್ಟು ಕದಲದೇ ಮಲಗಿದ್ದ ಹೆಬ್ಬಾವನ್ನು ಕಂಡ ಬಸ್, ಕಾರು ಹಾಗೂ ಬೈಕ್ ಸವಾರರು ವಾಹನವನ್ನು ನಿಲ್ಲಿಸಿದ್ದರು. 20 ನಿಮಿಷಗಳ ನಂತರ ಹೆಬ್ಬಾವು ನಿಧಾನ ಗತಿಯಲ್ಲಿ ಸಾಗಿ ಅರಣ್ಯ ಪ್ರದೇಶ ಸೇರಿತು. ನಂತರ ವಾಹನಗಳು ಸುಗಮವಾಗಿ ಚಲಿಸಿದವು.