ನೆಲಮಂಗಲ: ನಗರ ಠಾಣೆ ನೂತನ ಆರಕ್ಷಕ ನಿರೀಕ್ಷಕ ಭರತ್ಗೌಡ ಮಂಗಳವಾರ ಬೆಳಗ್ಗೆ ರೌಡಿಶೀಟರ್ಗಳ ಪರೇಡ್ ನಡೆಸಿದರು.
ನಗರ ಠಾಣೆಯಲ್ಲಿ 35 ಮಂದಿ ಸಕ್ರಿಯ ರೌಡಿಶೀಟರ್ಗಳಿದ್ದು, ಪರೇಡ್ನಲ್ಲಿ ಸುಮಾರು 23 ಮಂದಿ ರೌಡಿ ಶೀಟರ್ಗಳು ಇದ್ದರು.
ಸಹಕಾರ ಸಂದ ಚುನಾವಣೆ ಸೇರಿ ವಿವಿಧ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆ ಯಾವುದೇ ರೀತಿಯ ಅಪರಾಧ ಕೃತ್ಯ ನಡೆಯಬಾರದು ಎಂದು ಭರತ್ಗೌಡ ಎಚ್ಚರಿಸಿದರು.
ಗಣೇಶನಗುಡಿ ರಂಗ, ಮಂಜ, ರವಿ, ಹರೀಶ್ ಮತ್ತಿತ್ತರ ರೌಡಿಶೀಟರ್ಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ಕೊಟ್ಟರು. ದರೋಡೆ, ಸುಲಿಗೆ, ಆಕ್ರಮ ಬಡ್ಡಿ ದಂಧೆ, ಭೂ ಮಾಫಿಯಾ ಕೇಸ್ಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವ ಮತ್ತು ಗೂಂಡಾ ಕಾಯ್ದೆ ಕೇಸ್ ಹಾಕುವ ಎಚ್ಚರಿಕೆ ನೀಡಿದರು.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಹೆಂಡತಿ, ಮಕ್ಕಳ ಜತೆ ನೆಮ್ಮದಿ ಜೀವನ ನಡೆಸಿ ಸಮಾಜದಲ್ಲಿ ಉತ್ತಮ ರೀತಿ ನಡೆದುಕೊಳ್ಳುವಂತೆ ಬುದ್ಧಿವಾದ ಹೇಳಿದರು.