ಕುಷ್ಟಗಿ:ಪಟ್ಟಣದ 16ನೇ ವಾರ್ಡ್‌ನ ನಾಯಕವಾಡಿ ಓಣಿಯಲ್ಲಿ ನವರಾತ್ರಿ ನಿಮಿತ್ತ ಬನ್ನಿ ಮಹಾಂಕಾಳಿಗೆ ಮಹಾಭಿಷೇಕ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.
ಕಳೆದ 4ವರ್ಷಗಳಿಂದ ಕಾರ್ಯಕ್ರಮ ಆಯೋಜಿಸುತ್ತ ಬಂದಿರುವ ಓಣಿಯ ಮಹಿಳೆಯರು 5ನೇ ವರ್ಷದ ಕಾರ್ಯಕ್ರಮ ಆಯೋಜಿಸುವ ಮೂಲಕ ಬನ್ನಿಮಹಾಂಕಾಳಿಯ ಕೃಪೆಗೆ ಪಾತ್ರರಾದರು. ಉಡಿ ತುಂಬುವ ಕಾರ್ಯಕ್ರಮ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಾರ್ಡ್‌ನ ತನು ಕಂದಗಲ್, ನಾಗಮ್ಮ, ಅನ್ನಪೂರ್ಣ, ಮಲ್ಲಮ್ಮ, ಶಿಲ್ಪಾ ಮಾಲಾ, ಸ್ವಪ್ನಾ, ರೋಹಿಣಿ, ನೇತ್ರಾ, ಗಾಯತ್ರಿ, ಕವಿತಾ ನಾಯಕವಾಡಿ ಇತರರು ಪಾಲ್ಗೊಂಡಿದ್ದರು.