ಜಿಲ್ಲೆ

ಪ್ರಾಣ ಭಯವಿದೆ ಎಂದು ಜೈಲಿನಿಂದಲೇ ವಿಡಿಯೋ ಮಾಡಿದ ಕೈದಿ

ಬೆಳಗಾವಿ: ಪ್ರಾಣ ಭಯ ಹಾಗೂ ಜೈಲು ಸಿಬ್ಬಂದಿಯೇ ವಿಷ ಬೆರಸಿ ಕೊಲ್ಲಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ನಗರದ ಹಿಂಡಲಗಾ ಕಾರಾಗೃಹ ಕೊಠಡಿಯಿಂದಲೇ ಈಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಕೈದಿ ಜಯೇಶ್ ಪೂಜಾರಿ ವಿಡಿಯೋ ಹರಿ ಬಿಟ್ಟ ಘಟನೆ ನಡೆದಿದೆ.

ವಿಡಿಯೋದಲ್ಲಿ ತನಗೆ ಪ್ರಾಣ ಭಯವಿದ್ದು, ಕುತ್ತಿಗೆ ಕೊಯ್ಕಂಡು ನಾನೇ ಆತ್ಮಹತ್ಯೆಗೆ ಯತ್ನಿಸಿರುವೆ. ಕುತ್ತಿಗೆಗೆ ಗಾಯಗಳಾದರೂ ಚಿಕಿತ್ಸೆ ನೀಡಿಲ್ಲ. ಈ ವಿಷಯ ಕುಟುಂಬಸ್ಥರಿಗೆ ತಿಳಿಸಿರುವೆ. ನನ್ನ ಪರ ವಕೀಲರಿಗೂ ಅರ್ಜಿ ಸಲ್ಲಿಸಿರುವೆ. ಆದರೂ ನನ್ನ ಅರ್ಜಿಯನ್ನು ವಕೀಲರಿಗೆ ತಲುಪಿಸದೇ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದ್ದಾನೆ.