The Eightfold Path of Donation and Puja Festival 
ಜಿಲ್ಲೆ

ದಸರಾ ಉತ್ಸವ ಅದ್ದೂರಿ ಆಚರಣೆ ಪೂರ್ವಭಾವಿ ಸಭೆ ನಡೆಯಿತು

ತೇರದಾಳ: ನಾಡ ಹಬ್ಬ ದಸರಾ ಉತ್ಸವದ ನಿಮಿತ್ತ ಕಲ್ಲಟ್ಟಿ ಗಲ್ಲಿ ಆದಿಶಕ್ತಿ ತರುಣ ಮಂಡಳಿ ಹನುಮಾನ ದೇವಸ್ಥಾನ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಒಂಬತ್ತು ದಿನ ಧಾರ್ಮಿಕ ಕಾರ್ಯ ನಡೆಸುವುದು, ಆದಿಶಕ್ತಿ ದೇವಿ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಸ್ಪರ್ಧೆ ಆಯೋಜನೆ, ಮುತೆದೆಯರಿಗೆ ಉಡಿ ತುಂಬುವುದು, ಅನ್ನಪ್ರಸಾದ ವ್ಯವಸ್ಥೆ ಸೇರಿ ವಿವಿಧ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

27ನೇ ವರ್ಷದ ದಸರಾ ಉತ್ಸವ ಸಮಿತಿ ಅಧ್ಯರನ್ನಾಗಿ ರಾಯಪ್ಪ ಅಥಣಿ, ಉಪಾಧ್ಯರನ್ನಾಗಿ ಸಂಗಮೇಶ ಸನಪೇಟೆ, ಕಾರ್ಯದರ್ಶಿಯಾಗಿ ತಮ್ಮಣಿ ನಾಗರೆಡ್ಡಿ, ಖಜಾಂಚಿಯಾಗಿ ಸಂಗಮೇಶ ನಿವರಗಿ ಅವರನ್ನು ಆಯ್ಕೆ ಮಾಡಲಾಯಿತು. ಬಸವರಾಜ ಮುದಕನ್ನವರ, ರಾಜು ಹೊಸಮನಿ, ಅಲ್ಲಪ್ಪ ಇಂಗಳಗಿ, ದಾನಪ್ಪ ಕರೋಲಿ, ನಾಗಪ್ಪ ಹೊಸಮನಿ, ಸಂಜು ಖವಾಸಿ, ಈರಪ್ಪ ತಾರದಾಳ ಇತರರು ಇದ್ದರು.