ಸಿಂಧನೂರು: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಹೇಳಿದರು.
ಇದನ್ನೂ ಓದಿ:ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ
ನಗರದ ತಹಸಿಲ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕೊಡುಗೆಯಾಗಿವೆ. ಮಲ್ಲಮ್ಮನ ದೈವಭಕ್ತಿ, ತಪಸ್ಸು, ತ್ಯಾಗ ಯುವಕರಿಗೆ ಅನುಕರಣೀಯ ಎಂದರು.
ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಮನುಕುಲದ ಇತಿಹಾಸದಲ್ಲೇ ಸ್ತ್ರೀ ಕುಲಕ್ಕೆ ಮಾದರಿಯಾಗಿರುವ ವ್ಯಕ್ತಿತ್ವದಿಂದ ಮಲ್ಲಮ್ಮಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತಿದ್ದರು. ಸಾಮಾಜಿಕ ಚಿಂತನೆಯಲ್ಲಿ ಧಾರ್ಮಿಕ ಸಾಧನೆಗೈದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ ಸಾಕ್ಷಾತ್ಕಾರಗೊಂಡು ದಿವ್ಯ ಚೇತನರಾಗಿದ್ದಾರೆ ಎಂದು ತಿಳಿಸಿದರು.
ಪ್ರಭಾರ ತಹಸೀಲ್ದಾರ್ ಶ್ರುತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಭೀಮನಗೌಡ ಕೊಳಬಾಳ, ರಡ್ಡಿ ಸಂಕ್ಷೇಮ ಸಂಘದ ಅಧ್ಯಕ್ಷ ಸತ್ಯನಗೌಡ ಒಳಬಳ್ಳಾರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಪ್ರಮುಖರಾದ ವೆಂಕನಗೌಡ ಮಲ್ಕಾಪುರ, ಖಾಜಿ ಮಲ್ಲಿಕ್ ವಕೀಲ, ದೊಡ್ಡನಗೌಡ ಬಾದರ್ಲಿ, ರಾಮನಗೌಡ ಮಲ್ಕಾಪುರ, ತಿಮ್ಮಣ್ಣ ಸಾಹುಕಾರ, ಪರ್ವತರೆಡ್ಡಿ ಹತ್ತಿಗುಡ್ಡ, ಚಂದ್ರಶೇಖರ ಇತರರಿದ್ದರು.