ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನ ಬದಲಾವಣೆ ಮಾಡ್ತೀವಿ. ಮೈಸೂರಿಗೆ ರೈಲು ತಂದದ್ದು ಮೈಸೂರು ಅರಸರು. ಮೈಸೂರು ಮಹಾರಾಜರ ವೈಯಕ್ತಿಕ ಯೋಜನೆಯಾಗಿತ್ತು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ, ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆಗಾಗಿ ಸಾಕಷ್ಟು ಜನ ಮನವಿ ಮಾಡಿದ್ದಾರೆ. ಮೈಸೂರಿಗೆ ರೈಲು ತರುವಲ್ಲಿ ಒಡೆಯರ್ ಕೊಡುಗೆ ಅಪಾರ. ಮೈಸೂರು ಮಹಾರಾಜರ ವೈಯಕ್ತಿಕ ಯೋಜನೆಯಾಗಿತ್ತು. ಅವರ ಹೆಸರನ್ನು ಒಂದು ರೈಲಿಗೂ ಇಟ್ಟಿಲ್ಲ. ಆ ವಂಶವನ್ನು ನಿರ್ವಂಶ ಮಾಡಲು ಹೋದವನ ಹೆಸರೇಕೆ? ಟಿಪ್ಪು ಸುಲ್ತಾನ್ ಒಂದು ಹಳಿಯನ್ನೂ ಹಾಕಿಲ್ಲ. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ. ರೈಲಿಗೆ ಟಿಪ್ಪು ಸುಲ್ತಾನ್ ಹೆಸರು ಇರಬಾರದು ಎಂದರು.